ಸಾರಾಂಶ
‘ದೊಡ್ಡ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ದಾಪುಗಾಲಿಡುತ್ತಿರುವ ಭಾರತ ಸದ್ಯ 125 ಗಿಗಾವ್ಯಾಟ್ ಸೌರವಿದ್ಯತ್ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಗಳಿಸಿದೆ. ಇದರೊಂದಿಗೆ 3ನೇ ದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿದೆ’ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲೀಗ 125 ಗಿಗಾವ್ಯಾಟ್ ಉತ್ಪಾದನೆ: ಜೋಶಿ
ಪಿಟಿಐ ನವದೆಹಲಿ‘ದೊಡ್ಡ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ದಾಪುಗಾಲಿಡುತ್ತಿರುವ ಭಾರತ ಸದ್ಯ 125 ಗಿಗಾವ್ಯಾಟ್ ಸೌರವಿದ್ಯತ್ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಗಳಿಸಿದೆ. ಇದರೊಂದಿಗೆ 3ನೇ ದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿದೆ’ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ 8ನೇ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಪಾಕ್-28ರಲ್ಲಿ ನಿರ್ಧಾರವಾಗಿರುವಂತೆ, 2030ರ ಹೊತ್ತಿಗೆ ವಿಶ್ವದಲ್ಲಿ ನವೀಕರಿಸಬಹುದಾದ ಇಂಧನದ ಪ್ರಮಾಣ 11,000 ಗಿಗಾವ್ಯಾಟ್‌ಗೆ ತಲುಪಬೇಕು. ಇದಕ್ಕೆ ಸೌರಶಕ್ತಿಯೊಂದೇ ದಾರಿ’ ಎಂದರು.ಈ ನಿಟ್ಟಿನಲ್ಲಿ ಭಾರತದ ಪ್ರಗತಿಯನ್ನು ವಿವರಿಸುತ್ತಾ, ‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ದೇಶದ ಸೌರವಿದ್ಯುತ್ ಯೋಜನೆ ಬೆಳೆದುನಿಂತಿದೆ. 20 ಲಕ್ಷ ಮನೆಗಳು ಪಿಎಂ ಸೂರ್ಯಘರ್ ಯೋಜನೆಯ ಲಾಭ ಪಡೆಯುತ್ತಿವೆ’ ಎಂದರು.