2070ರ ವೇಳೆಗೆ ಶೂನ್ಯ ಮಾಲಿನ್ಯ ಸಾಧನೆ ಗುರಿ

| Published : Feb 02 2024, 01:00 AM IST / Updated: Feb 02 2024, 07:53 AM IST

Solar Panel

ಸಾರಾಂಶ

2070ನೇ ಇಸವಿಯ ಹೊತ್ತಿಗೆ ಶೂನ್ಯ ಮಾಲಿನ್ಯ (ನೆಟ್‌ ಝೀರೋ) ಸಾಧಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ 1 ಗಿಗಾವ್ಯಾಟ್‌ನಷ್ಟು ವಿದ್ಯುತ್ತನ್ನು ಕಡಲತೀರದಿಂದ ಉತ್ಪಾದಿಸಲು ಹೂಡಿಕೆ ಮಾಡಲಾಗುತ್ತಿದೆ.

2070ನೇ ಇಸವಿಯ ಹೊತ್ತಿಗೆ ಶೂನ್ಯ ಮಾಲಿನ್ಯ (ನೆಟ್‌ ಝೀರೋ) ಸಾಧಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ 1 ಗಿಗಾವ್ಯಾಟ್‌ನಷ್ಟು ವಿದ್ಯುತ್ತನ್ನು ಕಡಲತೀರದಿಂದ ಉತ್ಪಾದಿಸಲು ಹೂಡಿಕೆ ಮಾಡಲಾಗುತ್ತಿದೆ.

ಹಸಿರು ಮನೆ ಅನಿಲಗಳ ನಡುವೆ ಸಮತೋಲನ ಕಾಯ್ದುಕೊಳ್ಳುವಿಕೆ ಮತ್ತು ಅವುಗಳನ್ನು ಸಂಪೂರ್ಣವಾಗಿ ವಾತಾವರಣದಿಂದ ನಿರ್ಮೂಲ ಮಾಡುವಿಕೆ ಪ್ರಕ್ರಿಯೆಯನ್ನು ಒಳಗೊಂಡ ‘ನೆಟ್‌ ಝೀರೋ ಎಮಿಶನ್‌’ ಅನ್ನು 2070ರ ವೇಳೆಗೆ ಸಾಧಿಸಲಾಗುತ್ತದೆ. 

ಅಲ್ಲದೇ 2030ರ ವೇಳೆಗೆ ಅವಶ್ಯಕತೆಯಿರುವ ಶೇ.50ರಷ್ಟು ವಿದ್ಯುತ್ತನ್ನು ಸೌರಶಕ್ತಿಯಿಂದ ಮತ್ತು ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ಪಡೆಯಲು ತೀರ್ಮಾನಿಸಲಾಗಿದೆ.

ಇದಕ್ಕಾಗಿ ಸಾಂದ್ರೀಕೃತ ಜೈವಿಕ ಅನಿಲ(ಸಿಬಿಜಿ)ವನ್ನು ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್‌ಜಿ)ದಲ್ಲಿ ಮಿಶ್ರಣ ಮಾಡಿ ಸರಕು ಸಾಗಣೆಗೆ ಮತ್ತು ನೈಸರ್ಗಿಕ ಅನಿಲ (ಪಿಎನ್‌ಜಿ)ವನ್ನು ದೇಶೀಯ ಉದ್ದೇಶಕ್ಕೆ ಬಳಸುವುದನ್ನು ನಿಗದಿತವಾಗಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ. 

ಮಾಲಿನ್ಯಕಾರಕಗಳ ಬಿಡುಗಡೆ ಪ್ರಮಾಣವನ್ನು ಶೇ.33 ಇಳಿಸುವುದನ್ನು 2005ರಿಂದ 2019ರ ಅವಧಿಯಲ್ಲೇ ಅಂದರೆ 11 ವರ್ಷಗಳ ಮೊದಲೇ ಭಾರತ ಸಾಧಿಸಿದೆ. ಪ್ರಸ್ತುತ ಮಾಲಿನ್ಯ ಪ್ರಮಾಣದಲ್ಲಿ ಮಾನವ ಜನ್ಯ ಕಾರ್ಬನ್‌ ಶೇ.75.81ರಷ್ಟಿದ್ದು, ಇದು ಅತ್ಯಂತ ಅಧಿಕವಾಗಿದೆ. 

ಉಳಿದಂತೆ ಕೃಷಿ (ಶೇ.13.44), ಕೈಗಾರಿಕೆ (ಶೇ.8.41) ಮತ್ತು ತ್ಯಾಜ್ಯ (ಶೇ.2.34)ದಿಂದ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಬೇಕಾಗುವ ಕ್ರಮ ಕೈಗೊಳ್ಳಲು ಅವಶ್ಯವಿರುವ ಹಣಕಾಸಿನ ಸಹಾಯ ಒದಗಿಸಲು ತೀರ್ಮಾನಿಸಲಾಗಿದೆ.