ಭಾರತವೀಗ ರೈಫಲ್‌ ರಫ್ತು ದೇಶ: ಬೆಂಗ್ಳೂರು ಕಂಪನಿಯಿಂದ ಹಿರಿಮೆ

| Published : Jul 11 2024, 01:35 AM IST / Updated: Jul 11 2024, 05:00 AM IST

ಭಾರತವೀಗ ರೈಫಲ್‌ ರಫ್ತು ದೇಶ: ಬೆಂಗ್ಳೂರು ಕಂಪನಿಯಿಂದ ಹಿರಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ದಶಕಗಳಿಂದಲೂ ತನ್ನ ಅಗತ್ಯದ ಶಸ್ತ್ರಾಸ್ತ್ರಗಳಿಗಾಗಿ, ಸ್ನಿಪರ್‌ ರೈಫಲ್‌ಗಾಗಿ ವಿದೇಶಗಳನ್ನೇ ಅವಲಂಬಿಸಿದ್ದ ಭಾರತ, ಇದೀಗ ಇದೇ ಮೊದಲ ಬಾರಿಗೆ ತಾನೇ ಸ್ನಿಪರ್ ರೈಫಲ್‌ ರಫ್ತು ದೇಶವಾಗಿ ಹೊರಹೊಮ್ಮಿದೆ.

ನವದೆಹಲಿ: ದಶಕಗಳಿಂದಲೂ ತನ್ನ ಅಗತ್ಯದ ಶಸ್ತ್ರಾಸ್ತ್ರಗಳಿಗಾಗಿ, ಸ್ನಿಪರ್‌ ರೈಫಲ್‌ಗಾಗಿ ವಿದೇಶಗಳನ್ನೇ ಅವಲಂಬಿಸಿದ್ದ ಭಾರತ, ಇದೀಗ ಇದೇ ಮೊದಲ ಬಾರಿಗೆ ತಾನೇ ಸ್ನಿಪರ್ ರೈಫಲ್‌ ರಫ್ತು ದೇಶವಾಗಿ ಹೊರಹೊಮ್ಮಿದೆ. ವಿಶೇಷವೆಂದರೆ ದೇಶಕ್ಕೆ ಇಂಥದ್ದೊಂದು ಹಿರಿಮೆ ಬರಲು ಕಾರಣವಾಗಿರುವುದು ಬೆಂಗಳೂರು ಮೂಲದ ಎಸ್‌ಎಸ್‌ಎಸ್‌ ಡಿಫೆನ್ಸ್‌ ಸಂಸ್ಥೆ.

ವಿಶ್ವದ 30ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಲ್ಲಿರುವ ಈ ರೈಫಲ್‌ಗಳನ್ನು 1980ರ ದಶಕದಲ್ಲಿ ಮೊದಲ ಬಾರಿಗೆ ಫಿನ್ಲೆಂಡ್‌ ಮೂಲದ ಕಂಪನಿ ಉತ್ಪಾದಿಸಿತ್ತು. ಇದರ ವಿವಿಧ ಮಾದರಿಯ ಉತ್ಪನ್ನಗಳನ್ನ ವಿವಿಧ ದೇಶಗಳು ಉತ್ಪಾದನೆ ಮಾಡುತ್ತವೆ. ಈ ಪೈಕಿ ಬೆಂಗಳೂರು ಕಂಪನಿ 0.338 ಲಪುವಾ ಮ್ಯಾಗ್ನಮ್‌ ರೈಫಲ್‌ ಉತ್ಪಾದನೆ ಹಕ್ಕು ಪಡೆದುಕೊಂಡಿತ್ತು.

ಈ ರೈಫಲ್‌ ಅನ್ನು ಭಾರತದ ಮಿತ್ರ ದೇಶವೊಂದು ಖರೀದಿಸಲು ಒಪ್ಪಿದ್ದು, ಈಗಾಗಲೇ ರೈಫಲ್ಸ್‌ ರಫ್ತು ಮಾಡಲಾಗಿದೆ. ಇನ್ನೂ ಕೆಲ ದೇಶಗಳ ಜೊತೆ ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.