ಗೌತಮ್ ಅದಾನಿ ವಿರುದ್ಧದ ಹಗರಣ ಆರೋಪ : ‘ಮೋದಿ ಅದಾನಿ ಏಕ್‌ ಹೈ’ ಜಾಕೆಟ್‌ ಧರಿಸಿ ವಿಪಕ್ಷ ಪ್ರತಿಭಟನೆ

| Published : Dec 06 2024, 08:58 AM IST / Updated: Dec 06 2024, 10:19 AM IST

ಗೌತಮ್ ಅದಾನಿ ವಿರುದ್ಧದ ಹಗರಣ ಆರೋಪ : ‘ಮೋದಿ ಅದಾನಿ ಏಕ್‌ ಹೈ’ ಜಾಕೆಟ್‌ ಧರಿಸಿ ವಿಪಕ್ಷ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಮಿ ಗೌತಮ್ ಅದಾನಿ ವಿರುದ್ಧದ ಹಗರಣ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ತೀವ್ರಗೊಳಿಸಿರುವ ಇಂಡಿಯಾ ಕೂಟದ ಸಂಸದರು, ಗುರುವಾರ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.  

ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧದ ಹಗರಣ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ತೀವ್ರಗೊಳಿಸಿರುವ ಇಂಡಿಯಾ ಕೂಟದ ಸಂಸದರು, ಗುರುವಾರ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ‘ಮೋದಿ ಅದಾನಿ ಏಕ್‌ ಹೈ’, ‘ಅದಾನಿ ಸೇಫ್ ಹೈ’ ಎನ್ನುವ ಬರಹಗಳಿರುವ ಕಪ್ಪು ಬಣ್ಣದ ಜಾಕೆಟ್‌ ಧರಿಸಿ, ಸಂಸತ್‌ ಆವರಣದಲ್ಲಿ ಘೋಷಣೆ ಕೂಗಿದ್ದಾರೆ.ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಆರ್‌ಜೆಡಿ ಮತ್ತು ಇಂಡಿಯಾ ಮೈತ್ರಿಕೂಟದ ಇತರ ನಾಯಕರು ಇದರಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ‘ಅದಾನಿ ವಿರುದ್ಧ ತನಿಖೆಗೆ ಮೋದಿ ಆದೇಶಿಸಲು ಸಾಧ್ಯವಿಲ್ಲ. ಹಾಗೇ ಮಾಡಿದರೆ ಸ್ಚತಃ ಅವರೇ ತನಿಖೆ ಎದುರಿಸಬೇಕಾಗುತ್ತದೆ’ ಎಂದು ಕುಟುಕಿದರು.

ಅದಾನಿ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಬೇಕೆಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.