ಸಾರಾಂಶ
- ಅಕ್ಕಪಕ್ಕದ ದೇಶ ಭಿನ್ನಮತ ಬಗೆಹರಿಸಿಕೊಳ್ಳಬೇಕು: ಚೀನಾ ಅಧ್ಯಕ್ಷ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಸ್ತುಗಳ ಮೇಲೆ ಶೇ.26 ಹಾಗೂ ಚೀನಾ ವಸ್ತುಗಳ ಮೇಲೆ ಕಂಡು ಕೇಳರಿಯದ ಶೇ.125ಆಮದು ಸುಂಕ ಹೇರುತ್ತಿದ್ದಂತೆಯೇ, ‘ಭಾರತ-ಚೀನಾ ಒಟ್ಟಾಗಿ ಟ್ರಂಪ್ ವಿರುದ್ಧ ನಿಲ್ಲಬೇಕು’ ಎಂದು ಚೀನಾ ಆಗ್ರಹಿಸಿದೆ. ಈ ಮೂಲಕ ಶತ್ರುವಿನ ಶತ್ರು ಮಿತ್ರ ಎಂಬ ತತ್ವ ಪಾಲನೆಗೆ ಮುಂದಾಗಿದೆ.ಟ್ರಂಪ್ ಶೇ.125ರಷ್ಟು ತೆರಿಗೆ ಹೇರಿದ ಬಳಿಕ ಮೊದಲ ಬಾರಿ ಮಾತನಾಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ‘ಅಕ್ಕಪಕ್ಕದ ದೇಶಗಳು ಭಿನ್ನಮತ ಬಗೆಹರಿಸಿಕೊಂಡು ತಮ್ಮ ಬಾಂಧವ್ಯ ಬಲಪಡಿಸಿಕೊಳ್ಳಬೇಕು. ಪರಸ್ಪರ ವ್ಯಾಪಾರವನ್ನು ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು’ ಎಂದಿದ್ದಾರೆ.
ಇನ್ನು ಭಾರತದಲ್ಲಿನ ಚೀನಾ ವಿದೇಶಾಂಗ ಕಚೇರಿ ವಕ್ತಾರೆ ಯು ಜಿಂಗ್ ಟ್ವೀಟ್ ಮಾಡಿದ್ದು, ‘ಚೀನಾ-ಭಾರತ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಪರಸ್ಪರ ಲಾಭಗಳನ್ನು ಆಧರಿಸಿದೆ. ವಿಶೇಷವಾಗಿ ‘ಜಾಗತಿಕ ದಕ್ಷಿಣ’ದಲ್ಲಿರುವ ದೇಶಗಳ ಅಭಿವೃದ್ಧಿಯ ಹಕ್ಕನ್ನು ಕಸಿದುಕೊಳ್ಳುವ ಅಮೆರಿಕದ ಸುಂಕ ಕಸಿದುಕೊಳ್ಳುತ್ತಿದೆ. ಇಂಥ ಸವಾಲಿನ ಪರಿಸ್ಥಿತಿ ಎದುರಿಸಲು ಈ ಪ್ರದೇಶದ ಅತಿದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು’ ಎಂದು ಮನವಿ ಮಾಡಿದ್ದಾರೆ.ಟ್ರಂಪ್ ಎಫೆಕ್ಟ್: ಷೇರುಪೇಟೆ ಅಲ್ಪ ಕುಸಿತ
- ಸೆನ್ಸೆಕ್ಸ್ 379, ನಿಫ್ಟಿ 136 ಅಂಕ ಇಳಿಕೆ- ಜಾಗತಿಕ ಷೇರುಪೇಟೆ ಕೂಡ ಇಳಿಮುಖಮುಂಬೈ: ಮಂಗಳವಾರ ಚೇತರಿಕೆ ಕಂಡಿದ್ದ ದೇಶದ ಷೇರುಪೇಟೆ ಬುಧವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಹೊಸ ಆಮದು ಸುಂಕ ಜಾರಿಗೆ ಬರುತ್ತಿದ್ದಂತೆಯೇ ಮತ್ತೆ ಕುಸಿತ ಕಂಡಿದೆ. ಭಾರತ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯೂ ಬುಧವಾರ ಕುಸಿದಿದೆ.ಸೆನ್ಸೆಕ್ಸ್ ಬುಧವಾರ 379.9 ಅಂಕ ಕುಸಿದು 73,847ರಲ್ಲಿ ಅಂತ್ಯಗೊಂಡರೆ, ನಿಫ್ಟಿ 136.7 ಅಂಕ ಇಳಿಕೆ ಕಂಡು 22,399ರಲ್ಲಿ ಮುಕ್ತಾಯಗೊಂಡಿತು.ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಬುಧವಾರ ಷೇರುಪೇಟೆ ಕುಸಿದಿದ್ದು, ಜಪಾನ್ ಶೇ.4.7 , ಹಾಂಗ್‌ಕಾಂಗ್ ಶೇ.1.8, ದಕ್ಷಿಣ ಕೊರಿಯಾ ಶೇ.1.9, ಆಸ್ಟ್ರೇಲಿಯಾ ಶೇ.1.8 ಕುಸಿತ ಕಂಡಿವೆ-=--
ಹೆಚ್ಚುತ್ತಿರುವ ವ್ಯಾಪಾರ ಸಂಘರ್ಷ, ಟ್ರಂಪ್ ತೆರಿಗೆ ನೀತಿ, ವ್ಯಾಪಾರ ಕಳವಳ, ರಿಸರ್ವ್ ಬ್ಯಾಂಕ್ ಸತತ 2ನೇ ಅವಧಿಗೆ ಬಡ್ಡಿದರ ಇಳಿಕೆ ಮಾಡಿರುವುದು ಭಾರತದ ಷೇರುಪೇಟೆಯ ಮೇಲೆಯೂ ಪರಿಣಾಮ ಬೀರಿದೆ.