ಸಾರಾಂಶ
ಇತ್ತೀಚಿನ ಮಾತುಕತೆ ಅನ್ವಯ, ಭಾರತ ಮತ್ತು ಚೀನಾ ದೇಶಗಳು ಪೂರ್ವ ಲಡಾಖ್‌ನ ವಿವಾದಿತ ಪ್ರದೇಶಗಳಿಂದ ತಮ್ಮ ಸೇನೆ ಹಿಂಪಡೆತ ಪ್ರಕ್ರಿಯೆ ಪೂರ್ಣಗೊಳಿಸಿವೆ.
ನವದೆಹಲಿ: ಇತ್ತೀಚಿನ ಮಾತುಕತೆ ಅನ್ವಯ, ಭಾರತ ಮತ್ತು ಚೀನಾ ದೇಶಗಳು ಪೂರ್ವ ಲಡಾಖ್‌ನ ವಿವಾದಿತ ಪ್ರದೇಶಗಳಿಂದ ತಮ್ಮ ಸೇನೆ ಹಿಂಪಡೆತ ಪ್ರಕ್ರಿಯೆ ಪೂರ್ಣಗೊಳಿಸಿವೆ. ಇದರೊಂದಿಗೆ ಮುಂದಿನ ಹಂತದ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಂತೆ ಆಗಿದೆ.
ಒಪ್ಪಂದದ ಪ್ರಕಾರ ಎರಡೂ ದೇಶಗಳು ಡೆಮ್ಚೋಕ್ ಮತ್ತು ಡೆಸ್ಪಾಂಗ್‌ನಿಂದ ತಮ್ಮ ತಮ್ಮ ಸೇನಾ ಪಡೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನ ಆರಂಭಿಸಿದ್ದವು. ಈ ಪ್ರಕ್ರಿಯೆ ಮಂಗಳವಾರಕ್ಕೆ ಮುಕ್ತಾಯವಾಗಿದೆ. ಇದರ ಮುಂದಿನ ಭಾಗವಾಗಿ ವಿವಾದಿತ ಪ್ರದೇಶಗಳಲ್ಲಿ ಉಭಯ ದೇಶಗಳು ಶೀಘ್ರವೇ ಜಂಟಿ ಪಹರೆ ನಡೆಸಲಿವೆ. ಈ ಮೂಲಕ ಪೂರ್ವ ಲಡಾಖ್ ಪ್ರದೇಶವನ್ನು ಸಂಘರ್ಷಮುಕ್ತ ಮಾಡುವ ಗುರಿ ಹಾಕಿಕೊಂಡಿವೆ.ಈ ನಡುವೆ ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾರ ಎರಡೂ ಸೇನೆಯ ಸಿಬ್ಬಂದಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.