ಸಾರಾಂಶ
ಹಲವು ವರ್ಷಗಳಿಂದ ಭಾರತಕ್ಕಿದ್ದ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರಗಳ ಆಮದುಗಾರ ಎಂಬ ಹಣೆಪಟ್ಟಿ ಇದೀಗ ಉಕ್ರೇನ್ ಪಾಲಾಗಿದೆ. ರಷ್ಯಾ ದಾಳಿ ಬಳಿಕ ವಿಶ್ವದ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡುವ ದೇಶವಾಗಿ ಉಕ್ರೇನ್ ಹೊರಹೊಮ್ಮಿದೆ.
ನವದೆಹಲಿ: ಹಲವು ವರ್ಷಗಳಿಂದ ಭಾರತಕ್ಕಿದ್ದ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರಗಳ ಆಮದುಗಾರ ಎಂಬ ಹಣೆಪಟ್ಟಿ ಇದೀಗ ಉಕ್ರೇನ್ ಪಾಲಾಗಿದೆ. ರಷ್ಯಾ ದಾಳಿ ಬಳಿಕ ವಿಶ್ವದ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡುವ ದೇಶವಾಗಿ ಉಕ್ರೇನ್ ಹೊರಹೊಮ್ಮಿದೆ.
2020-24ನೇ ಸಾಲಿನಲ್ಲಿ ಉಕ್ರೇನ್ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. 2015-19ನೇ ಸಾಲಿಗೆ ಹೋಲಿಸಿದರೆ ಈ ಅವಧಿಯಲ್ಲಿ ಉಕ್ರೇನ್‌ನ ಶಸ್ತ್ರಾಸ್ತ್ರಗಳ ಆಮದಿನ ಪ್ರಮಾಣ 100 ಪಟ್ಟು ಹೆಚ್ಚಾಗಿದೆ.2022ರಲ್ಲಿ ಉಕ್ರೇನ್ ಮೇಲೆ ರಷ್ಯಾದ ಪೂರ್ಣಪ್ರಮಾಣದ ದಾಳಿ ಬಳಿಕ ಈ ಬದಲಾವಣೆ ಆಗಿದೆ. ಕನಿಷ್ಠ 35 ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿವೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್‌ಟಿಟ್ಯೂಟ್(ಎಸ್‌ಐಪಿಆರ್‌ಐ) ಹೇಳಿದೆ.
ಉಕ್ರೇನ್‌ಗೆ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಅಮೆರಿಕವೇ ಪೂರೈಸುತ್ತಿದೆ. ದೇಶದ ಶೇ.45ರಷ್ಟು ಶಸ್ತ್ರಾಸ್ತ್ರಗಳ ಆಮದು ಅಮೆರಿಕದಿಂದಲೇ ಆಗುತ್ತಿದೆ.ಭಾರತಕ್ಕೆ 2ನೇ ಸ್ಥಾನ:
ಇನ್ನು ಈ ಮುಂಚೆ ಶಸ್ತ್ರಾಸ್ತ್ರಗಳ ಆಮದು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ವಿಶ್ವದ ಶಸ್ತ್ರಾಸ್ತ್ರಗಳ ಆಮದಿನ ಶೇ.3ರಷ್ಟು ಭಾರತ ಮಾಡಿಕೊಳ್ಳುತ್ತಿದೆ. ಆದರೆ 2015-19ಕ್ಕೆ ಹೋಲಿಸಿದರೆ 202-24ರ ನಡುವೆ ಭಾರತದ ಶಸ್ತ್ರಾಸ್ತ್ರಗಳ ಆಮದಿನ ಪ್ರಮಾಣ ಶೇ.9.3ರಷ್ಟು ಕುಸಿತ ಕಂಡಿದೆ.ಭಾರತವು ಶೇ.36ರಷ್ಟು ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. 2015-19ರ ನಡುವೆ ರಷ್ಯಾದಿಂದ ಶೇ.55ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೆ, 2010-14ರಲ್ಲಿ ಈ ಪ್ರಮಾಣ ಸೇ.72ರಷ್ಟಿತ್ತು.-ಬಾಕ್ಸ್-ಅಮೆರಿಕ ಅತಿದೊಡ್ಡ ರಫ್ತುದಾರ
ಅಮೆರಿಕವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತು ದೇಶವಾದರೆ, ಎರಡನೇ ಸ್ಥಾನದಲ್ಲಿ ಫ್ರಾನ್ಸ್ ಮತ್ತು ಮೂರನೇ ಸ್ಥಾನದಲ್ಲಿ ರಷ್ಯಾ ಇದೆ. ಉಕ್ರೇನ್ ಯುದ್ಧದ ಬಳಿಕ ರಷ್ಯಾದ ಶಸ್ತ್ರಾಸ್ತ್ರ ರಫ್ತಿಗೆ ಹೊಡೆತ ಬಿದ್ದಿದೆ. ಚೀನಾವು ನಾಲ್ಕನೇ ಸ್ಥಾನದಲ್ಲಿದೆ.