ಸಾರಾಂಶ
ಮಾಲೆ: ಭಾರತವು ತನ್ನ ಎಲ್ಲಾ ಸೈನಿಕರನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ಶುಕ್ರವಾರ ಹೇಳಿದೆ.ಭಾರತದ ಜತೆ ಸಂಬಂಧ ಹಳಸಿದ ಬಳೊಲ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ತಮ್ಮ ದೇಶದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂಪಡೆಯಲು ಮೇ 10 ರ ಗಡುವು ನಿಗದಿಪಡಿಸಿದ್ದರು.
ಆ ಪ್ರಕಾರ ಮಾಲ್ಡೀವ್ಸ್‌ನಲ್ಲಿ ನೆಲೆಸಿರುದ್ದ ಸುಮಾರು 90 ಭಾರತೀಯ ಸೇನಾ ಸಿಬ್ಬಂದಿ ವಾಪಸು ಹೋಗಿದ್ದಾರೆ. ಕೊನೆಯ ಬ್ಯಾಚ್ ಭಾರತೀಯ ಸೈನಿಕರನ್ನು ಶುಕ್ರವಾರ ವಾಪಸ್ ಕಳುಹಿಸಲಾಗಿದೆರೆಂದು ಸರ್ಕಾರ ತಿಳಿಸಿದೆ.
ಈ ನಡುವೆ ಭಾರತ ಮಾಲ್ಡೀವ್ಸ್‌ಗೆ ನೀಡಿದ್ದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನಗಳನ್ನು ನಿರ್ವಹಿಸಲು ಕೆಲವು ಭಾರತೀಯ ಸಿಬ್ಬಂದಿ ಮಾಲ್ಡೀವ್ಸ್‌ಗೆ ಇತ್ತೀಚೆಗೆ ಬಂದಿದ್ದರು. ಅವರ ವಿವರಗಳನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಪ್ರವಾಸೋದ್ಯಮ ವಿಚಾರವಾಗಿ ಮಾಲ್ಡೀವ್ಸ್ ಹಾಗೂ ಭಾರತದ ಸಂಬಂಧ ಕಳೆದ ವರ್ಷ ಹಳಸಿತ್ತು. ಹೀಗಾಗಿ ಈ ಹಿಂದೆ ತನ್ನ ಸಹಾಯಕ್ಕಾಗಿ ಮಾಲ್ಡೀವ್ಸ್‌ಗೆ ಬಂದಿದ್ದ 90 ಭಾರತೀಯ ಸೇನಾ ಸಿಬ್ಬಂದಿಗೆ ಗೇಟ್‌ಪಾಸ್ ನೀಡಲು ಮಾಲ್ಡೀವ್ಸ್ ಸರ್ಕಾರ ನಿರ್ಧರಿಸಿತ್ತು.+