ಸಾರಾಂಶ
ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆತೆರಳಿದ್ದ ಗಗನಯಾತ್ರಿ ಶುಭಾಂಶು ಶುಕ್ಲಾ, ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ವೇಳೆ ತಾವು ಅಂತರಿಕ್ಷದಿಂದ ತೆಗೆದ ಬೆಂಗಳೂರು ಹಾಗೂ ಹೈದರಾಬಾದ್‌ನ ವಿಹಂಗಮ ಫೋಟೊಗಳನ್ನು ತೋರಿಸಿದ್ದಾರೆ.
ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆತೆರಳಿದ್ದ ಗಗನಯಾತ್ರಿ ಶುಭಾಂಶು ಶುಕ್ಲಾ, ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ವೇಳೆ ತಾವು ಅಂತರಿಕ್ಷದಿಂದ ತೆಗೆದ ಬೆಂಗಳೂರು ಹಾಗೂ ಹೈದರಾಬಾದ್‌ನ ವಿಹಂಗಮ ಫೋಟೊಗಳನ್ನು ತೋರಿಸಿದ್ದಾರೆ. ಜೂ.25ರಿಂದ ಜು.15ರವರೆಗೆ ಐಎಸ್‌ಎಸ್‌ನಲ್ಲಿದ್ದ ಶುಕ್ಲಾ, ಭಾನುವಾರ ಭಾರತಕ್ಕೆ ಆಗಮಿಸಿದ್ದು, ಸೋಮವಾರ ದಿಯವರನ್ನುಭೇಟಿಯಾಗಿ ತಮ್ಮ ಬಾಹ್ಯಾಕಾಶಯಾನದ ಅನುಭವಗಳನ್ನು ಹಂಚಿಕೊಂಡರು.
ಇದೇ ವೇಳೆ, ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಮುನ್ನಡೆಸಬಲ್ಲ 40-50 ಗಗನಯಾತ್ರಿಗಳ ತಂಡವನ್ನು ನಿರ್ಮಿಸುವ ಅಗತ್ಯವನ್ನು ಪ್ರಧಾನಿ ಮೋದಿಯವರು ಶುಕ್ಲಾ ಬಳಿ ವಿವರಿಸಿದ್ದಾರೆ.