ಭ್ರಷ್ಟಾಚಾರ ಸೂಚ್ಯಂಕ: 180 ದೇಶಗಳಲ್ಲಿ ಭಾರತ ನಂ. 93

| Published : Jan 31 2024, 02:22 AM IST / Updated: Jan 31 2024, 07:44 AM IST

corruption

ಸಾರಾಂಶ

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ವರದಿ ಪ್ರಕಾರ ಭಾರತವು ಭ್ರಷ್ಟಾಚಾರ ಸೂಚ್ಯಂಕದಲ್ಲಿ 93ನೇ ಸ್ಥಾನಕ್ಕಿಳಿದಿದೆ. ಕಳೆದ ಸಲ 85ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ 8 ಸ್ಥಾನ ಕುಸಿದಿದೆ.

ನವದೆಹಲಿ: ಜರ್ಮನಿ ಮೂಲದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಸಂಸ್ಥೆ 2023ನೇ ಸಾಲಿನ ಭ್ರಷ್ಟಾಚಾರ ಸೂಚ್ಯಂಕ ಬಿಡುಗಡೆ ಮಾಡಿದ್ದು, 180 ದೇಶಗಳ ಪೈಕಿ ಭಾರತ 93ನೇ ಸ್ಥಾನ ಪಡೆದುಕೊಂಡಿದೆ. 

2022ರಲ್ಲಿ 40 ಅಂಕಗಳೊಂದಿಗೆ 85ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ 39 ಅಂಕಗಳೊಂದಿಗೆ 93ನೇ ಸ್ಥಾನ ಪಡೆದುಕೊಂಡಿದೆ. ‘0’ ಅಂಕ ಪಡೆದ ದೇಶಗಳು ಅತ್ಯಂತ ಭ್ರಷ್ಟ ಎಂದು ಪರಿಗಣಿತವಾದರೆ 100 ಅಂಕ ಪಡೆದ ದೇಶಗಳು ಅತ್ಯಂತ ಸ್ವಚ್ಛ ಎಂದು ಪರಿಗಣಿಸಲ್ಪಡುತ್ತದೆ.

ಪಟ್ಟಿಯಲ್ಲಿ ದಕ್ಷಿಣ ಏಷ್ಯಾದ ದೇಶಗಳಾದ ಬಾಂಗ್ಲಾದೇಶ 149, ಪಾಕಿಸ್ತಾನ 133, ಶ್ರೀಲಂಕಾ 115ನೇ, ಸ್ಥಾನ ಪಡೆದಿವೆ. ಚೀನಾ 76ನೇ ಸ್ಥಾನ ಪಡೆದುಕೊಂಡಿದೆ.

ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನ ಪಡೆದ ದೇಶಗಳೆಂದರೆ ನ್ಯೂಜಿಲೆಂಡ್‌ (3) ಮತ್ತು ಸಿಂಗಾಪುರ (5), ಆಸ್ಟ್ರೇಲಿಯಾ (14), ಹಾಂಗ್‌ಕಾಂಗ್‌ (14), ಜಪಾನ್‌ (16), ಭೂತಾನ್‌ (26), ತೈವಾನ್‌ (28), ದಕ್ಷಿಣ ಕೊರಿಯಾ (32).

ಗರಿಷ್ಠ ಭ್ರಷ್ಟಾಚಾರದ ಮೂಲಕ ಪಟ್ಟಿಯಲ್ಲಿ ಕಡೆದ ಸ್ಥಾನ ಪಡೆದ ದೇಶಗಳೆಂದರೆ ಉತ್ತರ ಕೊರಿಯಾ (172), ಮ್ಯಾನ್ಮಾರ್‌ (162), ಆಫ್ಘಾನಿಸ್ತಾನ (162).