12 ಮರಾಠಾ ಕೋಟೆ ವಿಶ್ವಪರಂಪರೆ ಪಟ್ಟಿಗೆ

| N/A | Published : Jul 11 2025, 11:48 PM IST / Updated: Jul 12 2025, 04:22 AM IST

ಸಾರಾಂಶ

024-5ನೇ ಸಾಲಿನ ಯುನೆಸ್ಕೋ ವಿಶ್ವಪರಂಪರೆ ಪಟ್ಟಿ ಘೋಷಣೆ ಆಗಿದ್ದು, ಇದರಲ್ಲಿ ‘ಮರಾಠಾ ಸೇನಾ ಭೂದೃಶ್ಯಗಳು’ ಎಂದೇ ಖ್ಯಾತಿ ಪಡೆದಿರುವ 12 ಐತಿಹಾಸಿಕ ಮರಾಠಾ ಕೋಟೆಗಳು ಸ್ಥಾನ ಪಡೆದುಕೊಂಡಿವೆ.

 ಪ್ಯಾರಿಸ್‌: 2024-5ನೇ ಸಾಲಿನ ಯುನೆಸ್ಕೋ ವಿಶ್ವಪರಂಪರೆ ಪಟ್ಟಿ ಘೋಷಣೆ ಆಗಿದ್ದು, ಇದರಲ್ಲಿ ‘ಮರಾಠಾ ಸೇನಾ ಭೂದೃಶ್ಯಗಳು’ ಎಂದೇ ಖ್ಯಾತಿ ಪಡೆದಿರುವ 12 ಐತಿಹಾಸಿಕ ಮರಾಠಾ ಕೋಟೆಗಳು ಸ್ಥಾನ ಪಡೆದುಕೊಂಡಿವೆ.

ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ 12 ಕೋಟೆಗಳಿವೆ. ಅವುಗಳಲ್ಲಿ ಸಲ್ಹೇರ್ ಕೋಟೆ, ಶಿವನೇರಿ ಕೋಟೆ, ಲೋಹಗಡ, ರಾಯಗಡ, ರಾಜ್‌ಗಡ, ಪ್ರತಾಪಗಡ, ಸುವರ್ಣದುರ್ಗ, ಪನ್ಹಾಲಾ ಕೋಟೆ, ವಿಜಯದುರ್ಗ, ಖಂಡೇರಿ ಕೋಟೆ ಮತ್ತು ಮಹಾರಾಷ್ಟ್ರದ ಸಿಂಧುದುರ್ಗ ಮತ್ತು ತಮಿಳುನಾಡಿನ ಗಿಂಗಿ ಕೋಟೆ ಸೇರಿವೆ.

 17 ಮತ್ತು 19ನೇ ಶತಮಾನಗಳ ನಡುವೆ ಅಭಿವೃದ್ಧಿಪಡಿಸಲಾದ ಈ ಕೋಟೆಗಳು ಐತಿಹಾಸಿಕ ಪ್ರವಾಸಿ ತಾಣಗಳಾಗಿವೆ.. ಒಂದು ಕಾಲದಲ್ಲಿ ಭಾರತೀಯ ಉಪಖಂಡದ ದೊಡ್ಡ ಭಾಗ ಆಳಿದ ಮರಾಠಾ ಸಾಮ್ರಾಜ್ಯದ ಕಾರ್ಯತಂತ್ರದ ಜಾಣ್ಮೆಯನ್ನು ಪ್ರತಿಬಿಂಬಿಸುತ್ತವೆ.

Read more Articles on