ಭಾರತದ ಸಿನೆಮಾ ರಂಗದ ಸ್ಟಾರ್‌ಗಳ ಮಕ್ಕಳ ಪೈಕಿ ಖ್ಯಾತ ನಟ ಹೃತಿಕ್‌ ರೋಷನ್‌ ನಂ.1 ಶ್ರೀಮಂತ!

| Published : Oct 21 2024, 12:36 AM IST / Updated: Oct 21 2024, 05:08 AM IST

Hrithik Roshan

ಸಾರಾಂಶ

ಭಾರತದ ಸಿನೆಮಾ ರಂಗದ ಸ್ಟಾರ್‌ಗಳ ಮಕ್ಕಳ ಪೈಕಿ ಯಾರು ಅತ್ಯಂತ ಶ್ರೀಮಂತರು ಎಂಬ ವರದಿಯೊಂದು ಬಿಡುಗಡೆಯಾಗಿದ್ದು, ಖ್ಯಾತ ನಟ ಹೃತಿಕ್‌ ರೋಷನ್‌ ಭರ್ಜರಿ 3100 ಕೋಟಿ ರು. ಅಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಮುಂಬೈ: ಭಾರತದ ಸಿನೆಮಾ ರಂಗದ ಸ್ಟಾರ್‌ಗಳ ಮಕ್ಕಳ ಪೈಕಿ ಯಾರು ಅತ್ಯಂತ ಶ್ರೀಮಂತರು ಎಂಬ ವರದಿಯೊಂದು ಬಿಡುಗಡೆಯಾಗಿದ್ದು, ಖ್ಯಾತ ನಟ ಹೃತಿಕ್‌ ರೋಷನ್‌ ಭರ್ಜರಿ 3100 ಕೋಟಿ ರು. ಅಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ತಮ್ಮದೇ ನಿರ್ಮಾಣ ಸಂಸ್ಥೆ, ಎಚ್‌ಆರ್‌ಎಕ್ಸ್‌ ಎಂಬ ಕ್ರೀಡಾ ಉತ್ಪನ್ನಗಳ ಕಂಪನಿ, ಜಾಹೀರಾತು, ಸ್ಟಾರ್ಟಪ್‌ಗಳ ಹೂಡಿಕೆ ಮೂಲಕ ಹೃತಿಕ್‌ ರೋಷನ್‌ ಇಷ್ಟು ಸಂಪತ್ತು ಸಂಪಾದಿಸಿದ್ದಾರೆ. ಹೃತಿಕ್‌ರ ತಂದೆ ರಾಕೇಶ್‌ ರೋಷನ್‌, ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ಮಾಪಕರಾಗಿದ್ದಾರೆ.

ಹೃತಿಕ್‌ ನಂತರ ಯಾರ್‍ಯಾರು?:

3100 ಕೋಟಿ ರು. ಆಸ್ತಿ ಹೊಂದಿರುವ ಹೃತಿಕ್‌ ನಂತರದ ಖ್ಯಾತನಾಮ ಸ್ಟಾರ್‌ ಕಿಡ್‌ಗಳಲ್ಲಿ ಸಲ್ಮಾನ್‌ ಖಾನ್‌ (2900 ಕೋಟಿ ರು.), ಅಮೀರ್‌ ಖಾನ್‌ (1800 ಕೋಟಿ ರು.), ರಾಮ್‌ಚರಣ್‌ ತೇಜ (1340 ಕೋಟಿ ರು.), ಸೈಫ್‌ ಅಲಿ ಖಾನ್‌ (1200 ಕೋಟಿ ರು.), ಆಲಿಯಾ ಭಟ್‌ (550 ಕೋಟಿ ರು.), ಜೂ. ಎಂಟಿಆರ್‌ (500 ಕೋಟಿ ರು.), ರಣಬೀರ್‌ ಕಪೂರ್‌ (400 ಕೋಟಿ ರು.) ಪ್ರಭಾಸ್‌ (300 ಕೋಟಿ ರು.) ಮೊದಲಾದವರು ಇದ್ದಾರೆ.