ಸಮೂಹ ಡ್ರೋನ್‌ ದಾಳಿ ತಡೆವ ಕಿರು ಕ್ಷಿಪಣಿ ವ್ಯವಸ್ಥೆ ‘ಭಾರ್ಗವಾಸ್ತ್ರ’ ಪರೀಕ್ಷೆ ಯಶಸ್ವಿ

| Published : Jan 16 2025, 12:46 AM IST / Updated: Jan 16 2025, 04:48 AM IST

ಸಮೂಹ ಡ್ರೋನ್‌ ದಾಳಿ ತಡೆವ ಕಿರು ಕ್ಷಿಪಣಿ ವ್ಯವಸ್ಥೆ ‘ಭಾರ್ಗವಾಸ್ತ್ರ’ ಪರೀಕ್ಷೆ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ನವದೆಹಲಿ: ಸಾಮೂಹಿಕ ಡ್ರೋನ್‌ ದಾಳಿ ತಡೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮೊದಲ ಕಿರು ಕ್ಷಿಪಣಿ ವ್ಯವಸ್ಥೆಯಾದ ‘ಭಾರ್ಗವಾಸ್ತ್ರ’ವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ನವದೆಹಲಿ: ಸಾಮೂಹಿಕ ಡ್ರೋನ್‌ ದಾಳಿ ತಡೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮೊದಲ ಕಿರು ಕ್ಷಿಪಣಿ ವ್ಯವಸ್ಥೆಯಾದ ‘ಭಾರ್ಗವಾಸ್ತ್ರ’ವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಸೋಲಾರ್‌ ಗ್ರೂಪ್‌ನ ಅಂಗಸಂಸ್ಥೆಯಾದ ಇಇಎಲ್‌ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯನ್ನು ಒಡಿಶಾದ ಗೋಪಾಲಪುರ ಕಡಲತೀರದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ 2.5 ಕಿ.ಮೀ. ದೂರದಲ್ಲಿದ್ದ ಗುರಿಯ ಮೇಲೆ ನಿಖರವಾಗಿ ದಾಳಿ ನಡೆಸಿದ ಭಾರ್ಗವಾಸ್ತ್ರ ತನ್ನ ಸಾಮರ್ಥ್ಯ ಪ್ರದರ್ಶಿಸಿತು.

ಹಲವು ದೇಶಗಳ ಬಳಿ ಈಗಾಗಲೇ ಡ್ರೋನ್‌ ದಾಳಿ ತಡೆಗಟ್ಟುವ ತಂತ್ರಜ್ಞಾನ ಇದ್ದರೂ, ಹಲವು ಸ್ತರಗಳಲ್ಲಿ ಡ್ರೋನ್‌ಗಳ ಸಮೂಹವನ್ನೇ ಹಿಮ್ಮೆಟ್ಟಿಸುವ ತಾಕತ್ತು ಭಾರ್ಗವಾಸ್ತ್ರದಲ್ಲಿ ಮಾತ್ರವೇ ಇರುವುದು.

ಭಾರ್ಗವಾಸ್ತ್ರದ ವಿಶೇಷತೆಗಳು:

ಇದು 6 ಕಿ.ಮೀ. ದೂರದಲ್ಲಿರುವ ಅತಿ ಚಿಕ್ಕ ಡ್ರೋನ್‌ಗಳನ್ನೂ ಗುರುತಿಸಿ ದಾಳಿ ಮಾಡಬಲ್ಲದು

10 ಕಿ.ಮೀ. ಅಂತರದಲ್ಲಿರುವ ಮಧ್ಯಮ ಹಾಗೂ ದೊಡ್ಡ ಡ್ರೋನ್‌ಗಳನ್ನೂ ಗುರುತಿಸಬಲ್ಲದು

ರಾಡಾರ್‌ ಕಣ್ತಪ್ಪಿಸಬಲ್ಲ ಉಪಕರಣಗಳನ್ನು ಇದು ಇನ್‌ಫ್ರಾರೆಡ್ ವ್ಯವಸ್ಥೆಯಿಂದ ಗುರುತಿಸಬಲ್ಲದು

ಏಕಕಾಲದಲ್ಲಿ 64 ಕ್ಕೂ ಹೆಚ್ಚು ಕಿರು ಕ್ಷಿಪಣಿ ಉಡ್ಡಯನ ಮೂಲಕ ಡ್ರೋನ್‌ ದಾಳಿ ತಡೆವ ಸಾಮರ್ಥ್ಯ

ಸಮುದ್ರಮಟ್ಟದಿಂದ 5000 ಮೀ. ಎತ್ತರದ ಪರ್ವತ, ಮರುಭೂಮಿಯಲ್ಲೂ ನಿಯೋಜನೆ ಸಾಧ್ಯ