ಅಮೆರಿಕ ಅಗ್ನಿ ಅವಗಢ: ಭಾರತ ಸಂಜಾತ ಪತ್ರಕರ್ತ ಫಾಜಿಲ್‌ ಸಾವು

| Published : Feb 26 2024, 01:32 AM IST

ಸಾರಾಂಶ

ಹೆಶಿಂಜರ್ ಸಂಸ್ಥೆಯಲ್ಲಿ ಪತ್ರಕರ್ತನಾಗಿದ್ದ ಫಾಜಿಲ್‌ ತನ್ನ ಮನೆಯಿರುವ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಗಢ ಸಂಭವಿಸಿದ ಪರಿಣಾಮ ದುರಂತಕ್ಕೆ ಬಲಿಯಾಗಿದ್ದಾನೆ.

ನ್ಯೂಯಾರ್ಕ್‌: ಅಮೆರಿಕದಲ್ಲಿ ಭಾರತೀಯರ ಸಾವಿನ ಸರಣಿ ಮುಂದುವರೆದಿದೆ. ಮ್ಯಾನಹಟನ್‌ ಪ್ರದೇಶದ ಬಹುಮಹಡಿ ಕಟ್ಟಡವೊಂದರಲ್ಲಿ ಶುಕ್ರವಾರ ಅಗ್ನಿ ಅವಗಢ ಸಂಭವಿಸಿದ ಪರಿಣಾಮ ಭಾರತೀಯ ಮೂಲದ ಪತ್ರಕರ್ತ ಫಾಜಿ಼ಲ್‌ ಖಾನ್‌ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆರು ಅಂತಸ್ತಿನ ಕಟ್ಟಡದಲ್ಲಿ ಲಿಥಿಯಂ ಅಯಾನ್‌ ಬ್ಯಾಟರಿ ಸ್ಫೋಟಕವಾಗಿ ಅಗ್ನಿ ಅವಗಢ ಸಂಭವಿಸಿದೆ ಎಂಬುದಾಗಿ ನ್ಯೂಯಾರ್ಕ್‌ ಅಗ್ನಿಶಾಮಕ ದಳ ತಿಳಿಸಿದೆ. ಘಟನೆಯಲ್ಲಿ ಅಸುನೀಗಿರುವ ಪತ್ರಕರ್ತ ಫಾಜಿ಼ಲ್‌ ಖಾನ್‌ ಅಮೆರಿಕದ ಖ್ಯಾತ ಸುದ್ದಿಸಂಸ್ಥೆ ಹೆಶಿಂಜರ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೊಲಂಬಿಯಾ ಜರ್ನಲಿಸಂ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದ. ಈ ಹಿನ್ನೆಲೆಯಲ್ಲಿ ಭಾರತೀಯ ದೂತಾವಾಸ ಕಚೇರಿ ತೀವ್ರ ಸಂತಾಪ ವ್ಯಕ್ತಪಡಿಸಿ ಆತನ ಕಳೇಬರವನ್ನು ಪೋಷಕರಿಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.