ಲೆಬನಾನ್‌ ಪೇಜರ್‌ ಸ್ಫೋಟಕೇಸ್‌ : ಕೇರಳ ಉದ್ಯಮಿಗೆಬಲ್ಗೇರಿಯಾ ಕ್ಲೀನ್‌ಚಿಟ್‌- ವಯನಾಡ್‌ನ ರಿನ್ಸನ್‌ ಜೋಸ್‌ ನಾಪತ್ತೆ

| Published : Sep 22 2024, 01:50 AM IST / Updated: Sep 22 2024, 05:03 AM IST

pager bomb
ಲೆಬನಾನ್‌ ಪೇಜರ್‌ ಸ್ಫೋಟಕೇಸ್‌ : ಕೇರಳ ಉದ್ಯಮಿಗೆಬಲ್ಗೇರಿಯಾ ಕ್ಲೀನ್‌ಚಿಟ್‌- ವಯನಾಡ್‌ನ ರಿನ್ಸನ್‌ ಜೋಸ್‌ ನಾಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಲೆಬನಾನ್‌ ಹಾಗೂ ಸಿರಿಯಾದಲ್ಲಿ ಪೇಜರ್‌ ಸ್ಫೋಟ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಇಸ್ರೇಲ್‌ ಕೊಂದು ಹಾಕಿದ ಘಟನೆಯಲ್ಲಿ ಕೇರಳದ ವಯನಾಡ್‌ ಜಿಲ್ಲೆಯ ವ್ಯಕ್ತಿಯೊಬ್ಬನ ಕೈವಾಡವಿದೆ ಎಂಬ ವರದಿಗಳ ಬೆನ್ನಲ್ಲೇ, ಬಲ್ಗೇರಿಯಾ ಸರ್ಕಾರ ಆ ಭಾರತೀಯನಿಗೆ ಕ್ಲೀನ್‌ಚಿಟ್‌ ನೀಡಿದೆ.

ಸೋಫಿಯಾ/ವಯನಾಡ್‌: ಲೆಬನಾನ್‌ ಹಾಗೂ ಸಿರಿಯಾದಲ್ಲಿ ಪೇಜರ್‌ ಸ್ಫೋಟ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಇಸ್ರೇಲ್‌ ಕೊಂದು ಹಾಕಿದ ಘಟನೆಯಲ್ಲಿ ಕೇರಳದ ವಯನಾಡ್‌ ಜಿಲ್ಲೆಯ ವ್ಯಕ್ತಿಯೊಬ್ಬನ ಕೈವಾಡವಿದೆ ಎಂಬ ವರದಿಗಳ ಬೆನ್ನಲ್ಲೇ, ಬಲ್ಗೇರಿಯಾ ಸರ್ಕಾರ ಆ ಭಾರತೀಯನಿಗೆ ಕ್ಲೀನ್‌ಚಿಟ್‌ ನೀಡಿದೆ.

ವಯನಾಡ್‌ ಜಿಲ್ಲೆಯ ಮಾನಂದವಾಡಿ ಮೂಲದ ರಿನ್ಸನ್‌ ಜೋಸ್‌ (37) ಕೈವಾಡ ಇಸ್ರೇಲ್‌ ದಾಳಿ ಹಿಂದೆ ಇದೆ ಎಂಬ ವರದಿಗಳು ಬಂದಿದ್ದವು. ಇದನ್ನು ಬಲ್ಗೇರಿಯಾ ನಿರಾಕರಿಸಿದೆ. ಆದರೆ ರಿನ್ಸನ್‌ ಜೋಸ್‌ ಈಗ ನಾಪತ್ತೆಯಾಗಿದ್ದು ಆತಂಕ ಹೆಚ್ಚಲು ಕಾರಣವಾಗಿದೆ.

ಬಲ್ಗೇರಿಯಾ ಹೇಳುವುದೇನು?:

ಲೆಬನಾನ್‌ ಹಾಗೂ ಸಿರಿಯಾದಲ್ಲಿ ಸ್ಫೋಟಗೊಂಡ ಪೇಜರ್‌ಗಳನ್ನು ಹಂಗೇರಿ ಮೂಲದ ಬಿಎಸಿ ಕಂಪನಿ ಉತ್ಪಾದನೆ ಮಾಡಿತ್ತು. ಅದನ್ನು ರಿನ್ಸನ್‌ ಜೋಸ್‌ ಒಡೆತನದ ನಾರ್ಟಾ ಗ್ಲೋಬಲ್‌ ಕಂಪನಿ ಸಾಗಣೆ ಕೆಲಸ ಮಾಡಿತ್ತು. ಹೀಗಾಗಿ ಒಟ್ಟಾರೆ ಇಸ್ರೇಲ್‌ ನಡೆಸಿದ ಸ್ಫೋಟದ ಹಿಂದೆ ರಿನ್ಸನ್‌ ಜೋಸ್‌ ಕೈವಾಡವಿದೆ ಎಂದು ವರದಿಗಳು ತಿಳಿಸಿದ್ದವು.

ಈ ಬಗ್ಗೆ ಬಲ್ಗೇರಿಯಾದ ರಾಷ್ಟ್ರೀಯ ತನಿಖಾ ಸಂಸ್ಥೆ ಎಸ್‌ಎಎನ್‌ಎಸ್‌ ಸಂಸ್ಥೆ ತನಿಖೆ ನಡೆಸಿ, ರಿನ್ಸನ್‌ ಜೋಸ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿದೆ.

ರಿನ್ಸನ್‌ ಪುದುಚೇರಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಹಾಗೂ ನಾರ್ವೆಯ ಓಸ್ಲೋದಲ್ಲಿ ಉನ್ನತ ವ್ಯಾಸಂಗ ಮಾಡಿ, ದಶಕದ ಹಿಂದೆ ನಾರ್ವೆಗೆ ಸ್ಥಳಾಂತರಗೊಂಡಿದ್ದಾರೆ.