ಭಾರತ ‘ಯಶಸ್ವಿ’ ದಾಖಲೆ!

| Published : Feb 19 2024, 01:33 AM IST / Updated: Feb 19 2024, 08:48 AM IST

ಸಾರಾಂಶ

ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಭಾರತಕ್ಕೆ ದಾಖಲೆಗಳ ಜಯ ಲಭಿಸಿದ್ದು, ಯಶಸ್ವಿ ಜೈಸ್ವಾಲ್‌ ದ್ವಿಶತಕದ ಜೊತೆಗೆ ರನ್‌ಗಳ ಲೆಕ್ಕಾಚಾರದಲ್ಲಿ ಬೃಹತ್‌ ಗೆಲುವು ಲಭಿಸಿದೆ. ಜೊತೆಗೆ ಒಂದೇ ಟೆಸ್ಟ್‌ ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್‌ ಸಿಡಿಸಿದ ಕೀರ್ತಿಗೂ ಭಾರತ ಭಾಜನವಾಗಿದೆ.

ಇಂಗ್ಲೆಂಡ್‌ ವಿರುದ್ಧ ರಾಜಕೋಟ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಭಾನುವಾರ ಭಾರಿ ಅಂತರದ ಗೆಲುವು ಸಾಧಿಸಿದ ಭಾರತ ತಂಡ, ದಾಖಲೆಗಳ ಸುರಿಮಳೆಯನ್ನೇ ಸುರಿಸಿದೆ. 

ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಅವರು ದ್ವಿಶತಕ ಸಿಡಿಸುವ ಜತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿ ಗಮನಸೆಳೆದಿದ್ದಾರೆ.

214 ರನ್‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ ದ್ವಿಶತಕ ಚಚ್ಚಿದ ಜೈಸ್ವಾಲ್‌. 

ಸರಣಿಯೊಂದರಲ್ಲಿ ವಿರಾಟ್‌ ಕೊಹ್ಲಿ ಬಳಿಕ ದ್ವಿಶತಕ ಗಳಿಸಿದ ಭಾರತದ 2ನೇ ಆಟಗಾರ

434 ರನ್‌: ಭಾರತದ ಜಯದ ಅಂತರ. ಭಾರತದ ಟೆಸ್ಟ್‌ ಇತಿಹಾಸದಲ್ಲೇ ಇದು ದಾಖಲೆ

28 ಸಿಕ್ಸರ್‌: ಟೆಸ್ಟ್‌ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿ ಭಾರತ ವಿಶ್ವದಾಖಲೆ

48 ಸಿಕ್ಸರ್‌: ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟ್‌ ತಂಡ 

ಯಶಸ್ವಿ ಸಿಕ್ಸರ್‌ ಸುರಿಮಳೆ!
20 ಸಿಕ್ಸರ್‌: ಟೆಸ್ಟ್‌ ಸರಣಿಯೊಂದರಲ್ಲಿ 20 ಸಿಕ್ಸರ್‌ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟ್‌ ಆಟಗಾರ

12 ಸಿಕ್ಸರ್‌: ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ್ದ ವಾಸೀಂ ಅಕ್ರಮ ದಾಖಲೆ ಸರಿಸಮ

10 ಸಿಕ್ಸರ್‌: ಇನ್ನಿಂಗ್ಸ್‌ನಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತದ ಮೊದಲ ಆಟಗಾರ