ಕಾಶ್ಮೀರದ ಗುಜ್ಜರ್‌ ಭಯೋತ್ಪಾದಕ: ಕೇಂದ್ರ ಸರ್ಕಾರ ಘೋಷಣೆ

| Published : Mar 08 2024, 01:45 AM IST

ಸಾರಾಂಶ

ನಿಷೇಧಿತ ಎಲ್‌ಇಟಿ ಭಯೋತ್ಪಾದನಾ ಸಂಘಟನೆಯ ಸದಸ್ಯನಾಗಿರುವ ಮೊಹಮ್ಮದ್‌ ಖಾಸಿಂ ಗುಜ್ಜರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

ನವದೆಹಲಿ: ಕಾಶ್ಮೀರ ಹಾಗೂ ಭಾರತದ ಅನೇಕ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವ ಮೊಹಮ್ಮದ್‌ ಖಾಸಿಂ ಗುಜ್ಜರ್‌ ಎಂಬಾತನನ್ನು ಭಯೋತ್ಪಾದಕ ಎಂದು ಕೇಂದ್ರ ಸರ್ಕಾರ ಗುರುವಾರ ಘೋಷಣೆ ಮಾಡಿದೆ. ಲಷ್ಕರ್‌ ಎ ತೊಯ್ಬಾ ಸಂಘಟನೆಯ ಸದಸ್ಯನಾಗಿರುವ ಗುಜ್ಜರ್‌ ನಡೆಸಿದ ಭಯೋತ್ಪಾದಬನೆಯಿಂದದ ಆನೇಕ ಸಾವು- ನೋವುಗಳು ಉಂಟಾಗಿವೆ. ಭಾರತದ ವಿರುದ್ಧ ಅನೇಕ ತಂತ್ರಗಳನ್ನು ಹೂಡಿ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಡ್ರೋನ್‌ಗಳ ರವಾನೆಯಂತಹ ದೇಷದ್ರೋಹ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿ ‘ರಾಷ್ಟ್ರದ ಏಕತೆಗೆ ಮತ್ತು ಸಮಗ್ರತೆಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ನಿರ್ದಾಕ್ಷೀರ್ಣಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪೋಸ್ಟ್ ಮಾಡಿದ್ದಾರೆ.