ಇಲ್ಲಿ ವಾಸವಿರುವ ಭಾರತೀಯ ಮೂಲದ 29 ವರ್ಷದ ಯುವಕನೊಬ್ಬ ತಮ್ಮ ತಾಯಿಯ ಜನ್ಮದಿನಾಂಕದ ಸಂಖ್ಯೆಯಿದ್ದ ಲಾಟರಿ ಟಿಕೆಟ್‌ ಖರೀದಿಸಿದ್ದು, ಅವರಿಗೆ ಬರೋಬ್ಬರಿ 240 ಕೋಟಿ ರು.ಲಾಟರಿ ಹೊಡೆದಿದೆ.

ಅಬುಧಾಬಿ: ಇಲ್ಲಿ ವಾಸವಿರುವ ಭಾರತೀಯ ಮೂಲದ 29 ವರ್ಷದ ಯುವಕನೊಬ್ಬ ತಮ್ಮ ತಾಯಿಯ ಜನ್ಮದಿನಾಂಕದ ಸಂಖ್ಯೆಯಿದ್ದ ಲಾಟರಿ ಟಿಕೆಟ್‌ ಖರೀದಿಸಿದ್ದು, ಅವರಿಗೆ ಬರೋಬ್ಬರಿ 240 ಕೋಟಿ ರು.ಲಾಟರಿ ಹೊಡೆದಿದೆ.

240 ಕೋಟಿ ರು. ಮೊತ್ತದ ಚೆಕ್‌

ವಿಜೇತ ಅನಿಲ್‌ಗೆ ಸಾಂಕೇತಿಕವಾಗಿ 240 ಕೋಟಿ ರು. ಮೊತ್ತದ ಚೆಕ್‌ ಹಸ್ತಾಂತರಿಸಿ, ಅವರನ್ನು ಸಂದರ್ಶಿಸಿದ ವಿಡಿಯೋವನ್ನು ಯುಎಇ ಲಾಟರಿ ಹಂಚಿಕೊಂಡಿದೆ. ಇದರಲ್ಲಿ ಅನಿಲ್‌, ‘ಇಷ್ಟು ದೊಡ್ಡ ಮೊತ್ತವನ್ನು ಗೆದ್ದಿರುವುದು ಖುಷಿ ತಂದಿದೆ. ನಾನಿದನ್ನು ಸರಿಯಾದ ರೀತಿಯಲ್ಲಿ ವ್ಯಯಿಸುವ ಮತ್ತು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ.

ಯುಎಇಗೆ ಕರೆತಂದು, ಜೀವನ

 ಒಂದು ಸೂಪರ್‌ಕಾರ್‌ ಖರೀದಿಸಿ, ಐಷಾರಾಮಿ ಅಥವಾ ಸಪ್ತತಾರಾ ಹೊಟೆಲ್‌ನಲ್ಲಿ ಮೋಜು ಮಾಡಬೇಕೆಂದಿದ್ದೇನೆ. ಜತೆಗೆ ನನ್ನಿಡೀ ಪರಿವಾರವನ್ನು ಯುಎಇಗೆ ಕರೆತಂದು, ಜೀವನಪೂರ್ತಿ ಅವರೊಂದಿಗೆ ಇಲ್ಲೇ ನೆಲೆಸಬೇಕು ಎಂಬ ಹಂಬಲವೂ ಇದೆ. ಜತೆಗೆ, ಗೆದ್ದ ಹಣದ ಒಂದು ಭಾಗವನ್ನು ದಾನ ಮಾಡುತ್ತೇನೆ’ ಎಂದಿದ್ದಾರೆ.