18 ನೇಪಾಳಿಯರು ಸೇರಿ 286 ಜನರು ಭಾರತಕ್ಕೆ

| Published : Oct 18 2023, 01:01 AM IST

ಸಾರಾಂಶ

ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾಗಿರುವ ಆಪರೇಷನ್‌ ಅಜಯ್‌ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಂಗಳವಾರದ ವಿಮಾನದಲ್ಲಿ 18 ನೇಪಾಳಿಯರು ಸೇರಿದಂತೆ ಒಟ್ಟು 286 ಜನರನ್ನು ಕರೆ ತರಲಾಗಿದೆ.
ನವದೆಹಲಿ: ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆರಂಭಿಸಲಾಗಿರುವ ಆಪರೇಷನ್‌ ಅಜಯ್‌ ಕಾರ್ಯಾಚರಣೆ ಭರದಿಂದ ಸಾಗಿದ್ದು, ಮಂಗಳವಾರದ ವಿಮಾನದಲ್ಲಿ 18 ನೇಪಾಳಿಯರು ಸೇರಿದಂತೆ ಒಟ್ಟು 286 ಜನರನ್ನು ಕರೆ ತರಲಾಗಿದೆ. ಇದರೊಂದಿಗೆ ಈವರೆಗೆ ಅಂದಾಜು 1200 ಭಾರತೀಯರು ತವರಿಗೆ ಮರಳಿದಂತೆ ಆಗಿದೆ.