ಹಡಗು ಅಪಹರಣ: ಸೊಮಾಲಿ ಕಡಲ್ಗಳ್ಳರ ಯತ್ನ ವಿಫಲ

| Published : Mar 17 2024, 01:46 AM IST / Updated: Mar 17 2024, 08:09 AM IST

ಸಾರಾಂಶ

ಭಾರತೀಯ ನೌಕಾಪಡೆ ಸಾಹಸ ಮಾಡಿದ ಫಲವಾಗಿ 3 ತಿಂಗಳ ಹಿಂದೆ ಅಪಹರಣ ಆಗಿದ್ದ ಹಡಗಿನ ರಕ್ಷಣೆ ಮಾಡಲಾಗಿದೆ.

ನವದೆಹಲಿ: ಸೋಮಾಲಿ ಕಡಲ್ಗಳ್ಳರಿಂದ ಅಪಹರಣ ಆಗಿದ್ದ ಹಡಗು ಎಂವಿ-ರುಯೆನ್‌ನ್ನು ರಕ್ಷಣೆ ಮಾಡುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದ್ದು, ಇತ್ತೀಚೆಗೆ ನಡೆಯುತ್ತಿದ್ದ ಕಡಲ್ಗಳ್ಳತನ ಕೃತ್ಯಗಳಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ. 

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ನೌಕಾಪಡೆ, ‘ಮಾ.15ರಂದು ರುಯೆನ್‌ ಹಡಗನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. 

ಮೊದಲಿಗೆ ನಾವು ಕಡಲ್ಗಳ್ಳರಿಗೆ ಶರಣಾಗುವಂತೆ ತಿಳಿಸಿದಾಗ ಅವರು ನಮ್ಮತ್ತ ಗುಂಡು ಹಾರಿಸಿದರು. ಬಳಿಕ ಅಂತಾರಾಷ್ಟ್ರೀಯ ಕಾನೂನಿನಂತೆ ಆತ್ಮರಕ್ಷಣೆಯ ಪ್ರತೀಕವಾಗಿ ನಾವೂ ಅವರತ್ತ ದಾಳಿ ಮಾಡಬೇಕಾಯಿತು’ ಎಂದು ತಿಳಿಸಿದೆ. 

ಸೋಮಾಲಿಯಾ ಕಡಲ್ಗಳ್ಳರು ರುಯೆನ್‌ ಸರಕು ಸಾಗಾಣೆ ಹಡಗನ್ನು ಡಿ.14 ರಂದು ಅಪಹರಿಸಿ ಅದರ ಮೂಲಕ ಸಮುದ್ರದಲ್ಲಿ ಹಲವು ಹಡಗುಗಳನ್ನು ಹೈಜಾಕ್‌ ಮಾಡುವುದೂ ಸೇರಿದಂತೆ ಹಲವು ಕೃತ್ಯಗಳನ್ನು ಮಾಡುತ್ತಿದ್ದರು.