3ನೇ ಬಾರಿ ಬಾಹ್ಯಾಕಾಶಕ್ಕೆ ಸುನಿತಾ ವಿಲಿಯಮ್ಸ್ ಪ್ರಯಾಣ

| Published : Jun 06 2024, 12:31 AM IST

ಸಾರಾಂಶ

ಸತತ 2 ವೈಫಲ್ಯಗಳ ಬಳಿಕ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬುಧವಾರ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ.

ನವದೆಹಲಿ: ಸತತ 2 ವೈಫಲ್ಯಗಳ ಬಳಿಕ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬುಧವಾರ ಬಾಹ್ಯಾಕಾಶ ಪ್ರಯಾಣಕ್ಕೆ ಕೈಗೊಂಡಿದ್ದಾರೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬೋಯಿಂಗ್‌ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ್ದಾರೆ. ಕಳೆದ ತಿಂಗಳ 6ರಂದೇ ಸುನಿತಾ ಅಂತರಿಕ್ಷ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ರಾಕೆಟ್‌ನಲ್ಲಿ ಲೀಕ್‌ ಸಮಸ್ಯೆ ಕಾರಣದಿಂದ ಮುಂದೂಡಲಾಗಿತ್ತು. ಮತ್ತೊಂದು ಪ್ರಯತ್ನದಲ್ಲಿ ಕಳೆದ ಶನಿವಾರ ಪ್ರಯಾಣ ಆಗಬೇಕಿತ್ತು. ಆದರೆ ಕಂಪ್ಯೂಟರ್‌ ಸಮಸ್ಯೆಯಿಂದಾಗಿ ಕೊನೆ ಕ್ಷಣದಲ್ಲಿ ಪ್ರಯಾಣ ರದ್ದಾಗಿತ್ತು. ಆದರೆ ಬುಧವಾರ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದಾರೆ.

ವಿಲಿಯಮ್ಸ್ ಹೊರತಾಗಿ ಬುಚ್‌ ವಿಲ್ಮೋರ್‌ ಕೂಡ ಅಂತರಿಕ್ಷಕ್ಕೆ ಪ್ರಯಾಣ ಕೈಗೊಳ್ಳಲಿದ್ದಾರೆ. ಸುನಿತಾ ಮತ್ತು ಬಟ್ಚ್‌ ವಿಲ್ಮೋರ್ ಒಂದು ವಾರ ಬಾಹ್ಯಾಕಾಶದಲ್ಲಿಯೇ ಉಳಿಯಲಿದ್ದಾರೆ.ಇದರಿಂದಾಗಿ ಅಮೆರಕದಲ್ಲಿ ಎಲಾನ್‌ ಮಸ್ಕ್‌ರ ಸ್ಟಾರ್‌ಲಿಂಕ್‌ ನಂತರ ಬಾಹ್ಯಾಕಾಶಕ್ಕೆ ಹಾರಿದ ಎರಡನೇ ಖಾಸಗಿ ಸಂಸ್ಥೆಯಾಗಿ ಬೋಯಿಂಗ್‌ ಹೊರಹೊಮ್ಮಿದೆ.