ರಷ್ಯಾ ಯುದ್ಧಕ್ಕೆ ಭಾರತೀಯರು: 7 ಕಡೆ ಸಿಬಿಐ ದಾಳಿ

| Published : Mar 08 2024, 01:49 AM IST

ಸಾರಾಂಶ

ಭಾರತೀಯರಿಗೆ ನೌಕರಿ ಆಮಿಷವೊಡ್ಡಿ ರಷ್ಯಾಗೆ ಕಳಿಸಿದ್ದಲ್ಲದೆ, ಅಲ್ಲಿ ರಷ್ಯಾ -ಉಕ್ರೇನ್ ಯುದ್ಧ ವಲಯಕ್ಕೆ ಅವರನ್ನು ತಳ್ಳಿದ ವಂಚಕರ ಜಾಲವನ್ನು ಸಿಬಿಐ ಗುರುವಾರ ರಾತ್ರಿ ಭೇದಿಸಿದೆ.

ನವದೆಹಲಿ: ಭಾರತೀಯರಿಗೆ ನೌಕರಿ ಆಮಿಷವೊಡ್ಡಿ ರಷ್ಯಾಗೆ ಕಳಿಸಿದ್ದಲ್ಲದೆ, ಅಲ್ಲಿ ರಷ್ಯಾ -ಉಕ್ರೇನ್ ಯುದ್ಧ ವಲಯಕ್ಕೆ ಅವರನ್ನು ತಳ್ಳಿದ ವಂಚಕರ ಜಾಲವನ್ನು ಸಿಬಿಐ ಗುರುವಾರ ರಾತ್ರಿಇ ಭೇದಿಸಿದೆ. ಈ ಸಂಬಂಧ ದೆಹಲಿ, ತಿರುವನಂತಪುರ, ಮುಂಬೈ, ಅಂಬಾಲ, ಚಂಡೀಗಢ, ಮಧುರೈ ಮತ್ತು ಚೆನ್ನೈ- ಹೀಗೆ 7 ನಗರಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ.

ಈ ರೀತಿ ಆಮಿಷಕ್ಕೆ ಬಲಿಯಾಗಿ ರಷ್ಯಾಗೆ ತೆರಳಿದ್ದ ಇಬ್ಬರು ಇತ್ತೀಚೆಗೆ ಭಾರತೀಯರು ಸಾವನ್ನಪ್ಪಿದ್ದಾರೆ. ಅಲ್ಲದೆ, ಕರ್ನಾಟಕದ ಕಲಬುರಗಿಯ 3 ಯುವಕರು ಸೇರಿ ಸುಮಾರು 100 ಭಾರತೀಯರು ಇನ್ನೂ ಅಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಇವರನ್ನು ರಷ್ಯಾಗೆ ಕಳಿಸಿದ ಭಾರತದಲ್ಲಿನ ಜಾಲದ ವಿರುದ್ಧ ಸಿಬಿಐ ಕಾರ್ಯಾಚರಣೆ ನಡೆಸುತ್ತಿದೆ.