ಮುಂಬೈನಲ್ಲಿ ತಪ್ಪಿದ ಮಹಾ ವಿಮಾನ ದುರಂತ

| Published : Jun 10 2024, 12:51 AM IST / Updated: Jun 10 2024, 04:54 AM IST

ಸಾರಾಂಶ

ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಹುದೊಡ್ಡ ವಿಮಾನ ದುರಂತವೊಂದು ತಪ್ಪಿದೆ. ಏರಿಂಡಿಯಾ ವಿಮಾನ ಟೇಕಾಫ್‌ ಆಗುವ ವೇಳೆ ಇಂಡಿಗೋ ವಿಮಾನ ಲ್ಯಾಂಡಿಂಗ್‌ ಆಗಿದೆ.

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಹುದೊಡ್ಡ ವಿಮಾನ ದುರಂತವೊಂದು ತಪ್ಪಿದೆ. ಏರಿಂಡಿಯಾ ವಿಮಾನ ಟೇಕಾಫ್‌ ಆಗುವ ವೇಳೆ ಇಂಡಿಗೋ ವಿಮಾನ ಲ್ಯಾಂಡಿಂಗ್‌ ಆಗಿದೆ. ಟೇಕಾಫ್‌ ಮತ್ತು ಲ್ಯಾಂಡಿಂಗ್‌ ನಡುವೆ ಕೆಲವೇ ಸೆಕೆಂಡ್‌ಗಳ ಅಂತರವಿದ್ದು ಅದೃಷ್ಟವಶಾತ್‌ ಯಾವುದೇ ದುರ್ಘಟನೆ ಸಂಭವಿಸಿಲ್ಲ.

ಏನಾಯ್ತು?:

ಮುಂಬೈ ವಿಮಾನ ನಿಲ್ದಾಣದಿಂದ ತಿರುವನಂತಪುರಕ್ಕೆ ಹೊರಟಿದ್ದ ಏರಿಂಡಿಯಾ ಟೇಕಾಫ್‌ ಆಗುತ್ತಿತ್ತು. ಈ ಹೊತ್ತಲ್ಲಿ ಇಂದೋರ್‌ನಿಂದ ಮುಂಬೈಗೆ ಆಗಮಿಸಿದ್ದ ಇಂಡಿಗೋ ಫ್ಲೈಟ್ ಅದೇ ರನ್‌ವೇನ್‌ಗೆ ಲ್ಯಾಂಡಿಂಗ್‌ಗೆ ಬಂದಿದೆ.

ಏರಿಂಡಿಯಾ ಟೇಕಾಫ್ ಆಗುವ ಮೊದಲೇ ಇಂಡಿಗೋ ವಿಮಾನಕ್ಕೆ ಸಿಬ್ಬಂದಿಗಳು ಲ್ಯಾಂಡ್ ಕ್ಲಿಯರೆನ್ಸ್ ಕೊಡಲಾಗಿತ್ತು. ಹೀಗಾಗಿ ಒಂದೇ ರನ್‌ವೇನಲ್ಲಿ ಏರಿಂಡಿಯಾ ವಿಮಾನ ನೆಲ ಬಿಟ್ಟು ಹಾರುವ ಮೊದಲೇ ಇಂಡಿಗೋ ವಿಮಾನ ರನ್‌ವೇ ಟಚ್‌ ಮಾಡಿದೆ. ಅದೃಷ್ಟವಶಾತ್‌ ಎರಡೂ ವಿಮಾನಗಳ ಹಾರಾಟದ ನಡುವೆ ಕೆಲ ಸೆಕೆಂಡ್‌ಗಳ ಅಂತರ ಇದ್ದ ಕಾರಣ ಅಪಘಾತ ತಪ್ಪಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೆಚ್ಚಿನ ತನಿಖೆಗೆ ಆದೇಶಿಸಿದೆ.