ಸಾರಾಂಶ
2025ನೇ ಸಾಲಿನ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂಟೋ ಅವರನ್ನು ಭಾರತ ಸರ್ಕಾರ ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಇದಕ್ಕೆ ಸುಬಿಯಾಂಟೋ ಸಮ್ಮತಿಸಿದ್ದು, ಅವರೊಂದಿಗೆ ಇಂಡೋನೇಷ್ಯಾದ ಸೇನಾ ತುಕಡಿಯೊಂದು ಕೂಡ ಆಗಮಿಸಿ ಗಣರಾಜ್ಯೋತ್ಸವ ಪಂಥಸಂಚಲನದಲ್ಲಿ ಭಾಗಿಯಾಗಲಿದೆ ಎನ್ನಲಾಗಿದೆ.
ನವದೆಹಲಿ: 2025ನೇ ಸಾಲಿನ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂಟೋ ಅವರನ್ನು ಭಾರತ ಸರ್ಕಾರ ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಇದಕ್ಕೆ ಸುಬಿಯಾಂಟೋ ಸಮ್ಮತಿಸಿದ್ದು, ಅವರೊಂದಿಗೆ ಇಂಡೋನೇಷ್ಯಾದ ಸೇನಾ ತುಕಡಿಯೊಂದು ಕೂಡ ಆಗಮಿಸಿ ಗಣರಾಜ್ಯೋತ್ಸವ ಪಂಥಸಂಚಲನದಲ್ಲಿ ಭಾಗಿಯಾಗಲಿದೆ ಎನ್ನಲಾಗಿದೆ.
ಪ್ರಬ್ರೊವೊ ಭೇಟಿ ವೇಳೆ ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿ ಕುರಿತು ಒಪ್ಪಂದಕ್ಕೆ ಪ್ರಭಾವೋ ಸಹಿ ಹಾಕುವ ಸಾಧ್ಯತೆ ಇದೆ. ಜೊತೆಗೆ ಭಾರತದ ಶಾಲೆಗಳಲ್ಲಿರುವ ಮಧ್ಯಾಹ್ನದ ಬಿಸಿಯೂಟ, ಕ್ಷೀರ ಭಾಗ್ಯ ರೀತಿ ಇಂಡೋನೇಷ್ಯಾದಲ್ಲಿಯೂ ಶುರು ಮಾಡಲು ಪ್ರಬೊವೊ ಕಾತರರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 2018ರಲ್ಲಿ ಇಂಡೋನೇಷ್ಯಾದ ಅಂದಿನ ಅಧ್ಯಕ್ಷ ಜೋಕೋ ವಿಡೊಡೊ ಅವರು ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು.