ಸಾರಾಂಶ
ಆಹಾರ ವಸ್ತುಗಳ ಬೆಲೆಗಳ ಏರಿಕೆಯ ಪರಿಣಾಮ ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.6.21ಕ್ಕೆ ಏರಿಕೆಯಾಗಿದೆ. ಈ ಮೂಲಕ ಹಣದುಬ್ಬರ ಕಳೆದ 14 ತಿಂಗಳುಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.
ನವದೆಹಲಿ: ಆಹಾರ ವಸ್ತುಗಳ ಬೆಲೆಗಳ ಏರಿಕೆಯ ಪರಿಣಾಮ ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.6.21ಕ್ಕೆ ಏರಿಕೆಯಾಗಿದೆ. ಈ ಮೂಲಕ ಹಣದುಬ್ಬರ ಕಳೆದ 14 ತಿಂಗಳುಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರಮುಖವಾಗಿ ಬೇಳೆ ಹಾಗೂ ಉತ್ಪನ್ನಗಳು, ಮೊಟ್ಟೆ, ಸಕ್ಕರೆ, ಮಿಠಾಯಿ, ಮಸಾಲೆ ಪದಾರ್ಥಗಳ ಬೆಲೆಯಲ್ಲಿ ಗಣನೀಯ ಏರಿಕೆ ಹಣದುಬ್ಬರ ಏರಿಕೆಗೆ ಕಾರಣವಾಗಿದೆ.ಕಳೆದ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.5.49ರಷ್ಟಿತ್ತು. ಇನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.4.87 ಇತ್ತು. ರಾಷ್ಟ್ರೀಯ ಸಾಂಖಿಕ ಕಚೇರಿಯ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಶೇ.9.24 ಇದ್ದ ಆಹಾರ ಚಿಲ್ಲರೆ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ.10.87ಕ್ಕೆ ತಲುಪಿದೆ.
ಒಟ್ಟಾರೆ ಚಿಲ್ಲರೆ ಹಣದುಬ್ಬರ ಪ್ರಮಾಣವು ಆರ್‌ಬಿಐ ನಿಗದಿತ ಮಟ್ಟವನ್ನು ದಾಟಿ ಮೇಲೇರಿದ ಪರಿಣಾಮ ಸಾಲದ ಮೇಲಿನ ಬಡ್ಡಿದರಗಳನ್ನು ಇಳಿಸುವ ಚಿಂತನೆಗೆ ಬ್ರೇಕ್ ಹಾಕಲಿದೆ ಎನ್ನಲಾಗಿದೆ.