ಸಾರಾಂಶ
ಚೆನ್ನೈ: 3 ವರ್ಷದ ಹಿಂದೆ ಖರೀದಿಸಿದ ಎಲೆಕ್ಟ್ರಿಕ್ ಸ್ಕೂಟರ್‌ಗೆ ವ್ಯಕ್ತಿಯೊಬ್ಬ ಶೋರೂಂ ಮುಂದೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ ಘಟನೆ ತಮಿಳುನಾಡಿನ ಅಂಬಟ್ಟೂರಿನಲ್ಲಿ ವರದಿಯಾಗಿದೆ.
ಕಲೆಕ್ಷನ್ ಏಜೆಂಟ್ ಆಗಿರುವ ಪಾರ್ಥಸಾರಥಿ ಈ ಇ-ಸ್ಕೂಟರ್ ಖರೀದಿಸಿದ ತಿಂಗಳಲ್ಲೇ ಸಮಸ್ಯೆ ಕಾಣಿಸಿಕೊಂಡಿದೆ. ಶೋರೂಂ ಸಿಬ್ಬಂದಿ ಪ್ರತಿ 5 ಸಾವಿರ ಕಿ.ಮೀ.ಗೊಮ್ಮೆ ಬೇರಿಂಗ್ ಬದಲಾವಣೆಗೆ ಸೂಚಿಸಿದ್ದರು. ಅದರಂತೆ ಶೋರೂಂಗೆ ಹೋದಾಗ ಬಿಡಿಭಾಗ ಇಲ್ಲ ಎಂಬ ನೆಪ ಹೇಳಿ ಸಾಗಹಾಕಿದ್ದರು. ಆದರೆ ತನ್ನದಲ್ಲದ ನಿರ್ವಹಣೆ ಸಮಸ್ಯೆಯ ಕಾರಣಕ್ಕೆ ಕೊನೆಗೊಂದು ದಿನ ದಿಢೀರ್ ಎರಡೂ ಬ್ರೇಕ್ ಪ್ಯಾಡ್, ವೀಲ್ ಬೇರಿಂಗ್ ಮತ್ತು ಬೆಲ್ಟ್ ಬದಲಾಯಿಸುವಂತೆ ಸೂಚಿಸಿದಾಗ ಪಾರ್ಥಸಾರಥಿ ಪಿತ್ತ ನೆತ್ತಿಗೇರಿತ್ತು. ಪ್ರತಿ ತಿಂಗಳು ಸರಾಸರಿ 5 ಸಾವಿರ ರು.ನಷ್ಟು ಸರ್ವೀಸ್ ಮತ್ತು ರಿಪೇರಿಗೆಂದೇ ವೆಚ್ಚ ಮಾಡಿ ಕಂಗೆಟ್ಟಿದ್ದೇನೆ. 3 ವರ್ಷಗಳಲ್ಲಿ ಸ್ಕೂಟರ್ ಖರೀದಿ ದರಕ್ಕಿಂತಲೂ ನಿರ್ವಹಣಾ ವೆಚ್ಚವೇ ಹೆಚ್ಚಾಗಿತ್ತು. ಇದರಿಂದ ಬೇಸತ್ತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇನೆಂದು ಆತ ಹೇಳಿಕೊಂಡಿದ್ದಾನೆ.
ಈ ಹಿಂದೆ ಕರ್ನಾಟಕ ಸೇರಿ ವಿವಿಧೆಡೆ ಇದೇ ರೀತಿ ಇದೇ ರೀತಿ ಗ್ರಾಹಕರು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. ಇದೀಗ ತಮಿಳುನಾಡಿನ ತಿರುಮುಲ್ಲೈವಯಲ್ ಮೂಲದ ಪಾರ್ಥಸಾರಥಿ ಎಂಬಾತ ಅಂಥದ್ದೇ ಹಾದಿ ಹಿಡಿದಿದ್ದಾನೆ.