ಹೇಮಾಮಾಲಿನಿ ಬಗ್ಗೆ ಅವಹೇಳನ: ಸುರ್ಜೇವಾಲಾ ಪ್ರಚಾರಕ್ಕೆ ನಿಷೇಧ

| Published : Apr 17 2024, 01:31 AM IST / Updated: Apr 17 2024, 06:52 AM IST

ಹೇಮಾಮಾಲಿನಿ ಬಗ್ಗೆ ಅವಹೇಳನ: ಸುರ್ಜೇವಾಲಾ ಪ್ರಚಾರಕ್ಕೆ ನಿಷೇಧ
Share this Article
  • FB
  • TW
  • Linkdin
  • Email

ಸಾರಾಂಶ

ನಟಿ ಹಾಗೂ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಬಗ್ಗೆ ಕೀಳು ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ, 2 ದಿನದ ಮಟ್ಟಿಗೆ ಪ್ರಚಾರದಿಂದ ನಿರ್ಬಂಧ ಹೇರಿದೆ.

ನವದೆಹಲಿ: ನಟಿ ಹಾಗೂ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಬಗ್ಗೆ ಕೀಳು ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ, 2 ದಿನದ ಮಟ್ಟಿಗೆ ಪ್ರಚಾರದಿಂದ ನಿರ್ಬಂಧ ಹೇರಿದೆ.

‘ಮಂಗಳವಾರ ಸಂಜೆ 6ರುದ 48 ಗಂಟೆಗಳ ಕಾಲ ಸುರ್ಜೇವಾಲಾ ಯಾವುದೇ ಸಾರ್ವಜನಿಕ ಸಭೆಗಳು, ರ್‍ಯಾಲಿಗಳು, ರೋಡ್‌ಶೋಗಳು, ಸಂದರ್ಶನಗಳು, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಕೂಡದು’ ಎಂದು ಆಯೋಗ ಸೂಚಿಸಿದೆ.

ಇತ್ತೀಚೆಗೆ ಪ್ರಚಾರ ಸಭೆಯೊಂದರಲ್ಲಿ ‘ಹೇಮಾಮಾಲಿನಿಯನ್ನು ಜನ ಆಯ್ಕೆ ಮಾಡಿದ್ದು ನೆಕ್ಕೋದಕ್ಕಾ?’ ಎಂದು ಕೇಳಿದ್ದರು. ಇದು ವಿವಾದಕ್ಕೀಡಾಗಿತ್ತು ಹಾಗೂ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿತ್ತು.