ರಾಮ್‌ದೇವ್‌ ಪತಂಜಲಿ, ದಿವ್ಯ ಫಾರ್ಮಸಿ 14 ಉತ್ಪನ್ನ ನಿಷೇಧಕ್ಕೆ ತಡೆ

| Published : May 18 2024, 12:33 AM IST / Updated: May 18 2024, 06:33 AM IST

ರಾಮ್‌ದೇವ್‌ ಪತಂಜಲಿ, ದಿವ್ಯ ಫಾರ್ಮಸಿ 14 ಉತ್ಪನ್ನ ನಿಷೇಧಕ್ಕೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಪ್ರೀಂ ಕೋರ್ಟ್‌ನಿಂದ ಮೇಲಿಂದ ಮೇಲೆ ಛೀಮಾರಿ ಹಾಕಿಸಿಕೊಂಡಿದ್ದ ಬಾಬಾ ರಾಮ್‌ದೇವ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದ್ದು, ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಸಂಸ್ಥೆಗಳ 14 ಉತ್ಪನ್ನಗಳ ಮೇಲೆ ವಿಧಿಸಿದ್ದ ನಿಷೇಧಕ್ಕೆ ಉತ್ತರಾಖಂಡ ಸರ್ಕಾರ ತಾತ್ಕಾಲಿಕ ತಡೆ ನೀಡಿ ಸರ್ಕಾರ ಆದೇಶಿಸಿದೆ.

ಡೆಹ್ರಾಡೂನ್‌: ಸುಪ್ರೀಂ ಕೋರ್ಟ್‌ನಿಂದ ಮೇಲಿಂದ ಮೇಲೆ ಛೀಮಾರಿ ಹಾಕಿಸಿಕೊಂಡಿದ್ದ ಬಾಬಾ ರಾಮ್‌ದೇವ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದ್ದು, ಪತಂಜಲಿ ಹಾಗೂ ದಿವ್ಯ ಫಾರ್ಮಸಿ ಸಂಸ್ಥೆಗಳ 14 ಉತ್ಪನ್ನಗಳ ಮೇಲೆ ವಿಧಿಸಿದ್ದ ನಿಷೇಧಕ್ಕೆ ಉತ್ತರಾಖಂಡ ಸರ್ಕಾರ ತಾತ್ಕಾಲಿಕ ತಡೆ ನೀಡಿ ಸರ್ಕಾರ ಆದೇಶಿಸಿದೆ.

ಉತ್ತರಾಖಂಡದ ಆಯುರ್ವೇದ ಔಷಧೋತ್ಪನ್ನಗಳಿಗೆ ಲೈಸೆನ್ಸ್‌ ನೀಡುವ ಸಂಸ್ಥೆಯು ಸೂಕ್ತ ಕಾನೂನು ಕ್ರಮಗಳನ್ನು ಏಕಾಏಕಿ ಅನುಸರಿಸದೆ ದಿಢೀರ್‌ ರದ್ದು ಮಾಡಿದ್ದನ್ನು ಪತಂಜಲಿ ಆಯುರ್ವೇದ ಹಾಗೂ ದಿವ್ಯ ಫಾರ್ಮಸಿ ಸಂಸ್ಥೆಗಳು ಪ್ರಶ್ನಿಸಿದ್ದವು.

ಈ ಹಿನ್ನೆಲೆಯಲ್ಲಿ 14 ಉತ್ಪನ್ನಗಳನ್ನು ನಿಷೇಧ ಮಾಡಿದ್ದರ ಕುರಿತು ವರದಿ ಸಲ್ಲಿಸಲು ಉತ್ತರಾಖಂಡ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಇತ್ತೀಚೆಗೆ ‘ಕಾನೂನುರೀತ್ಯಾ ಕ್ರಮ ಕೈಗೊಳ್ಳದೆ ದಿಢೀರ್‌ ನಿಷೇಧ ಮಾಡಲಾಗಿದೆ’ ಎಂದು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧಕ್ಕೆ ತಾತ್ಕಾಲಿಕ ತಡೆ ನೀಡಿದೆ.