2024ರಲ್ಲಿ ಷೇರುಪೇಟೆ ಭಾರಿ ಪ್ರಮಾಣದಲ್ಲಿ ಏರಿಕೆ : ಹೂಡಿಕೆದಾರರ ಆಸ್ತಿ ₹110 ಲಕ್ಷ ಕೋಟಿ ಏರಿಕೆ!

| Published : Oct 03 2024, 01:18 AM IST / Updated: Oct 03 2024, 05:38 AM IST

ಸಾರಾಂಶ

2024ರಲ್ಲಿ ಷೇರುಪೇಟೆ ಏರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು 110.57 ಲಕ್ಷ ಕೋಟಿ ರು.ಗಳಷ್ಟು ಏರಿಕೆಯಾಗಿದೆ. ಬಿಎಸ್‌ಇಯಲ್ಲಿ ಲಿಸ್ಟ್‌ ಆಗಿರುವ ಸಂಸ್ಥೆಗಳ ಮಾರುಕಟ್ಟೆ ಬಂಡವಾಳವು 4,74,86,463.65 ಕೋಟಿ ರು.ಗೆ ತಲುಪಿದೆ. ಸೆನ್ಸೆಕ್ಸ್‌ 2024ರಲ್ಲಿ ಈವರೆಗೆ 16.64% ಜಿಗಿದಿದೆ.

ನವದೆಹಲಿ: 2024ರಲ್ಲಿ ಷೇರುಪೇಟೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿರುವ ಕಾರಣ ಹೂಡಿಕೆದಾರರ ಸಂಪತ್ತು ಈ ವರ್ಷ ಇಲ್ಲಿಯವರೆಗೆ 110.57 ಲಕ್ಷ ಕೋಟಿ ರು.ಗಳಷ್ಟು ಏರಿಕೆಯಾಗಿದೆ.

ಬಾಂಬೆ ಷೇರುಪೇಟೆಯಲ್ಲಿ ಲಿಸ್ಟ್‌ ಆಗಿರುವ ಸಂಸ್ಥೆಗಳ ಮಾರುಕಟ್ಟೆ ಬಂಡವಾಳದ ಪ್ರಮಾಣವು ಈ ವರ್ಷ ಇಲ್ಲಿಯವರೆಗೆ 110,57,617.4 ಕೋಟಿ ರು. ನಷ್ಟು ಏರಿದ್ದು, ಒಟ್ಟಾರೆ 4,74,86,463.65 ಕೋಟಿಗೆ ರು.ಗೆ ತಲುಪಿದೆ. ಸೆ.27ರ ಅಂಕಿ ಅಂಶದ ಪ್ರಕಾರ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲ ಕಂಪನಿಗಳ ಮಾರುಕಟ್ಟೆ ಮೌಲ್ಯವು ಸಾರ್ವಕಾಲಿಕ ಗರಿಷ್ಠ 477.93 ಲಕ್ಷ ಕೋಟಿ ರು.ಗೆ ಏರಿದೆ.

ಸೆನ್ಸೆಕ್ಸ್‌ 2024ರಲ್ಲಿ ಈವರೆಗೆ 12,026 ಅಂಕ ಅಥವಾ 16.64 ಶೇಕಡಾ ಜಿಗಿದಿದ್ದು, ಹೂಡಿಕೆದಾರರಿಗೆ ಉತ್ತಮ ಆದಾಯ ತಂದುಕೊಟ್ಟಿದೆ. ಈ ವರ್ಷದ ಆರಂಭದಲ್ಲಿ ಬಾಂಬೆ ಷೇರುಪೇಟೆ 72,271.94 ಅಂಕ ಇತ್ತು. ಸೆ.27ಕ್ಕೆ ಬಿಎಸ್ಇ ಸಾರ್ವಕಾಲಿಕ ಗರಿಷ್ಠ 85,978.25 ಅಂಕ ತಲುಪಿತ್ತು. ಮಂಗಳವಾರ 84,266.29 ಅಂಕಕ್ಕೆ ದಿನದ ವಹಿವಾಟು ಮುಗಿಸಿತ್ತು.

ಭಾರತೀಯ ಆರ್ಥಿಕತೆ ಬಲಗೊಳ್ಳುತ್ತಿರುವುದು ಇದರ ದ್ಯೋತಕ. ಇದೇ ಮಾರುಕಟ್ಟೆ ಏರಿಕೆಗೆ ಕಾರಣ ವಿಶ್ಲೇಷಕರು ಹೇಳಿದ್ದಾರೆ.