ಸಾರಾಂಶ
ನವದೆಹಲಿ: ಪಹಲ್ಗಾಂ ನರಮೇಧಕ್ಕೆ ಕಾರಣವಾದ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದ ಭಾರತ ಇದೀಗ ಪಾಕಿಸ್ತಾನದ ಮೇಲೆ ಜಲಯುದ್ಧ ಆರಂಭಿಸಿರುವ ಸುಳಿವುಗಳು ಸಿಕ್ಕಿವೆ.
ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ನದಿಗಳ ಪೈಕಿ ಒಂದಾ ಝೀಲಂ ನದಿಯಲ್ಲಿ ಶನಿವಾರ ಏಕಾಏಕಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದು ಭಾರತ ಪಾಕಿಸ್ತಾನಕ್ಕೆ ಪೂರ್ವ ಮಾಹಿತಿ ನೀಡದೆಯೇ ನೀರು ಹರಿಸಿರುವ ಪರಿಣಾಮ ಎಂದು ಪಾಕಿಸ್ತಾನದ ಕೆಲ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ನದಿಯಲ್ಲಿ ನೀರಿನ ಹರಿವಿನಲ್ಲಿ ಭಾರೀ ಏರಿಕೆಯಾಗಿರುವ ಕುರಿತ ಫೋಟೋ ಮತ್ತು ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿವೆ.
ಇನ್ನೊಂದೆಡೆ ಪಾಕಿಸ್ತಾನದ ಮರಾಲ ಪ್ರದೇಶದಲ್ಲಿ ಚೀನಾಬ್ ನದಿ ನೀರಿನ ಹರಿವು ಸುಮಾರು ಅರ್ಧದಷ್ಟು ಇಳಿಕೆಯಾಗಿದೆ ಎಂದು ಪಾಕಿಸ್ತಾನದ ಸರ್ಕಾರಿ ದಾಖಲೆಗಳು ಹೇಳುತ್ತಿವೆ. ಕೆಲ ದಿನಗಳ ಹಿಂದೆ 15,982 ಕ್ಯುಸೆಕ್‌ನಷ್ಟಿದ್ದ ನೀರಿನ ಹರಿವು, ಶನಿವಾರ 6,529 ಕ್ಯುಸೆಕ್‌ಗಿಳಿದಿದೆ ಎಂದು ಹೇಳಲಾಗಿದೆ. ವಿಶೇಷವೆಂದರೆ ರಾವಿ ನದಿ ನೀರು ಸ್ವಲ್ಪ ಪ್ರಮಾಣದಲ್ಲಿ ಕುಸಿದಿರುವುದು ಕಂಡುಬಂದಿದೆ.
ನದಿಯ ನೀರಿನ ಮಟ್ಟದಲ್ಲಿದಲ್ಲಿನ ಬದಲಾವಣೆ ಭಾರತ ಸರ್ಕಾರ ಅಥವಾ ಪಾಕಿಸ್ತಾನ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.