ಘರ್ ಘರ್ ಕಿ ಕಹಾನಿ ಎಂದ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ವಿರುದ್ಧ ಸೋದರಿ ಗರಂ

| Published : Oct 27 2024, 02:41 AM IST / Updated: Oct 27 2024, 04:40 AM IST

ಸಾರಾಂಶ

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಹಾಗೂ ಅವರ ಸೋದರಿ, ಕಾಂಗ್ರೆಸ್‌ ನಾಯಕಿ ವೈ.ಎಸ್. ಶರ್ಮಿಳಾ ವಿರುದ್ಧ ವಾಗ್ಯುದ್ಧ ಮುಂದುವರಿದಿದೆ. ತಮ್ಮ ವಿರುದ್ಧವೇ ಆಸ್ತಿ ಕಬಳಿಕೆ ಕೇಸು ದಾಖಲಿಸಿದ ಜಗನ್‌ ಅವರು, ‘ಇದು ಘರ್‌ ಘರ್‌ ಕಿ ಕಹಾನಿ’   ಎಂದಿರುವುದಕ್ಕೆ ಸೋದರಿ ಶರ್ಮಿಳಾ ಕಿಡಿಕಾರಿದ್ದಾರೆ.

ಅಮರಾವತಿ: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಹಾಗೂ ಅವರ ಸೋದರಿ, ಕಾಂಗ್ರೆಸ್‌ ನಾಯಕಿ ವೈ.ಎಸ್. ಶರ್ಮಿಳಾ ವಿರುದ್ಧ ವಾಗ್ಯುದ್ಧ ಮುಂದುವರಿದಿದೆ. ತಮ್ಮ ವಿರುದ್ಧವೇ ಆಸ್ತಿ ಕಬಳಿಕೆ ಕೇಸು ದಾಖಲಿಸಿದ ಜಗನ್‌ ಅವರು, ‘ಇದು ಘರ್‌ ಘರ್‌ ಕಿ ಕಹಾನಿ’ (ಮನೆಯೊಳಗಿನ ವಿಷಯ) ಎಂದಿರುವುದಕ್ಕೆ ಸೋದರಿ ಶರ್ಮಿಳಾ ಕಿಡಿಕಾರಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದು ಪ್ರತಿ ಮನೆಯಲ್ಲೂ ನಡೆಯುತ್ತದೆ ಮತ್ತು ಇದು '''''''' ಘರ್ ಘರ್ ಕಿ ಕಹಾನಿ '''''''' ಎಂದು ಜಗನ್ಮೋಹನ್ ರೆಡ್ಡಿ ಹೇಳುತ್ತಾರೆ. ಘರ್ ಘರ್ ಕಿ ಕಹಾನಿ ಎಂದರೇನು ? ತಾಯಿಯನ್ನು ನ್ಯಾಯಾಲಯಕ್ಕೆ ಎಳೆದು ತರುವುದು ಘರ್ ಘರ್ ಕಿ ಕಹಾನಿಯೇ? ಇದು ಪ್ರತಿ ಮನೆಯಲ್ಲೂ ನಡೆಯುವ ಸಮಸ್ಯೆಯೇ? ನಿಮಗೆ ಮಾನವೀಯತೆ ಇಲ್ಲವೇ? ನಿಮಗೆ ಯಾವುದೇ ಭಾವನೆಗಳಿಲ್ಲವೇ?’ ಎಂದು ಕಣ್ಣೀರು ಹಾಕಿದರು.

ಇತ್ತೀಚೆಗೆ ಜಗನ್‌ ಮೋಹನ ರೆಡ್ಡಿ ತಮ್ಮ ಹಾಗೂ ತಮ್ಮ ಪತ್ನಿ ಭಾರತಿ ಹೆಸರಲ್ಲಿದ್ದ, ಸರಸ್ವತಿ ಪವರ್‌ ಮತ್ತು ಇಂಡಸ್ಟ್ರೀಸ್‌ನ ಷೇರುಗಳನ್ನು ಶರ್ಮಿಳಾ ಅಕ್ರಮವಾಗಿ ತಮ್ಮ ಹಾಗೂ ತಮ್ಮ ತಾಯಿ ವಿಜಯಮ್ಮ ಅವರ ಹೆಸರಿಗೆ ವರ್ಗಾಯಿಸಿದ್ದಾರೆಂದು ಆರೋಪಿಸಿ ಜಗನ್‌ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದರು.