ಚೀನಾ ತಿರಸ್ಕರಿಸಿದ ಅಮೆರಿಕದ ಬೋಯಿಂಗ್‌ ವಿಮಾನ ಭಾರತಕ್ಕೆ?

| Published : Apr 23 2025, 12:33 AM IST

ಸಾರಾಂಶ

ಅಮೆರಿಕದೊಂದಿಗೆ ನೇರಾನೇರ ತೆರಿಗೆ ಯುದ್ಧಕ್ಕೆ ಇಳಿದಿರುವ ಚೀನಾ, ತಾನು ಈ ಮುಂಚೆ ನೀಡಿದ್ದ ಬೋಯಿಂಗ್‌ ವಿಮಾನಗಳ ಆರ್ಡರ್‌ ಅನ್ನು ರದ್ದು ಮಾಡಿದೆ. ಈ ಹೊತ್ತಿನಲ್ಲಿ, ಭಾರತ ಇದರ ಲಾಭ ಪಡೆಯಲು ಮುಂದಾದಂತಿದೆ.

ನವದೆಹಲಿ: ಅಮೆರಿಕದೊಂದಿಗೆ ನೇರಾನೇರ ತೆರಿಗೆ ಯುದ್ಧಕ್ಕೆ ಇಳಿದಿರುವ ಚೀನಾ, ತಾನು ಈ ಮುಂಚೆ ನೀಡಿದ್ದ ಬೋಯಿಂಗ್‌ ವಿಮಾನಗಳ ಆರ್ಡರ್‌ ಅನ್ನು ರದ್ದು ಮಾಡಿದೆ. ಈ ಹೊತ್ತಿನಲ್ಲಿ, ಭಾರತ ಇದರ ಲಾಭ ಪಡೆಯಲು ಮುಂದಾದಂತಿದೆ.

ಅಮೆರಿಕ ನಿರ್ಮಿತ ಬೋಯಿಂಗ್‌ ವಿಮಾನಗಳನ್ನು ಖರೀದಿಸದಂತೆ ಚೀನಾ ಸರ್ಕಾರ ವಿಮಾಯಯಾನ ಸಂಸ್ಥೆಗಳಿಗೆ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಇದರ ಬೆನ್ನಲ್ಲೇ, ಚೀನಾಗಾಗಿ ತಯಾರಿಸಲ್ಪಟ್ಟಿದ್ದ 41 737 ಮ್ಯಾಕ್ಸ್‌ ಜೆಟ್‌ಗಳನ್ನು ಖರೀದಿಸಲು ಏರ್‌ ಇಂಡಿಯಾ ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ. ಅಂತೆಯೇ, ಮಲೇಷಿಯಾದ ವಿಮಾನಯಾನ ಸಂಸ್ಥೆಯಾದ ಬಿಎಹ್‌ಡಿ ಕೂಡ ಜೆಟ್‌ಗಳನ್ನು ಖರೀದಿಸುವ ಸಂಬಂಧ ಬೋಯಿಂಗ್‌ ಜತೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.