ಸಾರಾಂಶ
ಗಾಜಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಫೋಟಕ ಹೇಳಿಕೆ ಬೆನ್ನಲ್ಲೆ, ಗಾಜಾದಲ್ಲಿರುವ ಪ್ಯಾಲೆಸ್ತೀನಿಯರ ತೆರವಿಗೆ ಅಗತ್ಯವಾದ ಸಿದ್ಧತಾ ಕ್ರಮಗಳನ್ನು ಇಸ್ರೇಲ್ ಆರಂಭಿಸಿದೆ.
ಕೈರೋ: ಗಾಜಾ ಪಟ್ಟಿಯನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಫೋಟಕ ಹೇಳಿಕೆ ಬೆನ್ನಲ್ಲೆ, ಗಾಜಾದಲ್ಲಿರುವ ಪ್ಯಾಲೆಸ್ತೀನಿಯರ ತೆರವಿಗೆ ಅಗತ್ಯವಾದ ಸಿದ್ಧತಾ ಕ್ರಮಗಳನ್ನು ಇಸ್ರೇಲ್ ಆರಂಭಿಸಿದೆ.
ಸಂಘರ್ಷ ಪೀಡಿತ ಪ್ರದೇಶದಲ್ಲಿ ಜನರ ತೆರವು, ನಾಗರಿಕರು ಹೊರ ದೇಶಗಳಿಗೆ ಹೋಗಲು ಬಯಸಿದರೆ ಅದಕ್ಕೆ ಅಗತ್ಯ ಸಂಚಾರ ವ್ಯವಸ್ಥೆ, ಕಟ್ಟಡ ತೆರವು ಮೊದಲಾದವುಗಳಿಗೆ ಅಗತ್ಯ ಸಿದ್ಧತೆ ಮಾಡುವಂತೆ ಇಸ್ರೇಲ್‌ನ ರಕ್ಷಣಾ ಸಚಿವರು, ಸೇನೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ವರದಿಗಳು ತಿಳಿಸಿವೆ.
ಆದರೆ ಗಾಜಾಪಟ್ಟಿ ಪ್ರದೇಶದ ಪ್ಯಾಲೆಸ್ತೀನಿಯರು ತಾವು ಜಾಗ ತೆರವು ಮಾಡುವುದಿಲ್ಲ ಎಂದು ಈಗಾಗಲೇ ಘೋಷನೆ ಮಾಡಿದ್ದಾರೆ. ಜೊತೆಗೆ ನೆರೆಯ ಅರಬ್ ದೇಶಗಳು ಕೂಡಾ ಇಂಥ ತೆರವು ಪ್ರಕ್ರಿಯೆ ವಿರೋಧಿಸುವುದಾಗಿ ಹೇಳಿವೆ.