ಗಗನಯಾನ ನೌಕೆ ಪರೀಕ್ಷೆಗೆ ಇಸ್ರೋ ಸಜ್ಜು

| Published : Oct 18 2023, 01:00 AM IST

ಸಾರಾಂಶ

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ಅ.21ರಂದು ಮೊದಲ ಬಾರಿಗೆ ಗಗನಯಾನ ನೌಕೆಯ ಪರೀಕ್ಷೆ ನಡೆಸಲಾಗುತ್ತಿದ್ದು, ನೌಕೆಯನ್ನು ರಾಕೆಟ್‌ಗೆ ಜೋಡಿಸುವ ಕಾರ್ಯ ಮಂಗಳವಾರ ಪೂರ್ಣಗೊಂಡಿದೆ ಎಂದು ಇಸ್ರೋ ಹೇಳಿದೆ.
ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ಅ.21ರಂದು ಮೊದಲ ಬಾರಿಗೆ ಗಗನಯಾನ ನೌಕೆಯ ಪರೀಕ್ಷೆ ನಡೆಸಲಾಗುತ್ತಿದ್ದು, ನೌಕೆಯನ್ನು ರಾಕೆಟ್‌ಗೆ ಜೋಡಿಸುವ ಕಾರ್ಯ ಮಂಗಳವಾರ ಪೂರ್ಣಗೊಂಡಿದೆ ಎಂದು ಇಸ್ರೋ ಹೇಳಿದೆ. ಶ್ರೀಹರಿಕೋಟಾದ ಮೊದಲ ಉಡಾವಣಾ ಕೇಂದ್ರದಿಂದ ಈ ಪ್ರಾಯೋಗಿಕ ಉಡಾವಣೆ ನಡೆಯಲಿದ್ದು, ಮುಂಜಾನೆ 8 ಗಂಟೆಗೆ ನೌಕೆ ಹಾರಲಿದೆ. ಪಿಎಸ್‌ಎಲ್‌ವಿ ರಾಕೆಟ್‌ಗಳಿಗೆ ಮೀಸಲಾಗಿದ್ದ ಈ ಕೇಂದ್ರದಲ್ಲಿ ಈ ಪರೀಕ್ಷಾರ್ಥ ಉಡಾವಣೆಗಾಗಿಯೇ ಬದಲಾವಣೆಗಳನ್ನು ಇಸ್ರೋ ಕೈಗೊಂಡಿದ್ದು, ನೌಕೆಯ ಪರೀಕ್ಷೆಗಾಗಿ ವಿಶೇಷವಾದ ರಾಕೆಟ್‌ ತಯಾರು ಮಾಡಿದೆ. ಇದರಲ್ಲಿ ಜಿಎಸ್‌ಎಲ್‌ವಿ ಮಾರ್ಕ್‌-2 ರಾಕೆಟ್‌ನಲ್ಲಿ ಬಳಸುವ 40 ಟನ್‌ ಇಂಧನದ ಬೂಸ್ಟರ್‌ಗಳನ್ನು ಅಳವಡಿಸಿದ್ದು, ಇದು ನೌಕೆಯನ್ನು 15 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಇಸ್ರೋ ಹೇಳಿದೆ.