ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3ಕ್ಕೆ ವರ್ಷ : ಮೊದಲ ಬಾಹ್ಯಾಕಾಶ ದಿನ ಆಚರಣೆ

| Published : Aug 24 2024, 01:24 AM IST / Updated: Aug 24 2024, 11:38 AM IST

Chandrayana 1

ಸಾರಾಂಶ

ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದು ಆ.23ಕ್ಕೆ ಒಂದು ವರ್ಷ ತುಂಬಿತು. ಅದರ ಬೆನ್ನಲ್ಲೇ ಶುಕ್ರವಾರ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಯಿತು.

ನವದೆಹಲಿ: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದು ಆ.23ಕ್ಕೆ ಒಂದು ವರ್ಷ ತುಂಬಿತು. ಅದರ ಬೆನ್ನಲ್ಲೇ ಶುಕ್ರವಾರ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಯಿತು.

ಈ ಹಿನ್ನೆಲೆಯಲ್ಲಿ ಚಂದ್ರಯಾನ -3 ಉಡ್ಡಯನದ ಮೂಲಕ ಸಂಗ್ರಹಿಸಿದ ವೈಜ್ಞಾನಿಕ ಮಾಹಿತಿಯನ್ನು ಇಸ್ರೋ ಬಹಿರಂಗಪಡಿಸಿದೆ. ವಿಕ್ರಮ್‌ ಲ್ಯಾಂಡರ್‌ನ ಮೂರು ಹಾಗೂ ಪ್ರಜ್ಞಾನ್‌ ರೋವರ್‌ನ ಎರಡು ಸೇರಿ ಒಟ್ಟು ಐದು ಪೆಲೋಡ್‌ಗಳಿಂದ 55 ಗಿಗಾಬೈಟ್‌ ಅಂಕಿ ಅಂಶಗಳನ್ನು ಬಾಹ್ಯಾಕಾಶ ಸಂಸ್ಥೆ ತೆರೆದಿಟ್ಟಿದೆ.

‘ಲಭಿಸಿರುವ ಮಾಹಿತಿಯನ್ನು ಕೇವಲ ಈ ಉಪಕರಣವನ್ನು ತಯಾರಿಸಿದ ವಿಜ್ಞಾನಿಗಳಿಗೆ ಸೀಮಿತವಾಗಿಡದೆ, ದೇಶದ ಹಾಗೂ ವಿದೇಶಗಳ ವಿಜ್ಞಾನಿಗಳಿಗೂ ದೊರಕುವಂತೆ ಮಾಡಲಾಗುತ್ತದೆ’ ಎಂದು ಇಸ್ರೋದ ಮುಖ್ಯಸ್ಥ ಎಸ್‌. ಸೋಮನಾಥ್‌ ಹೇಳಿದ್ದಾರೆ. ಇವುಗಳು ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರದ ಪೋರ್ಟಲ್‌ ಆದ  https://pradan.issdc.gov.in/. ನಲ್ಲಿ ಲಭ್ಯವಿದೆ.

ಚಂದ್ರಯಾನ 3 ಯಶಸ್ವಿ ಉಡ್ಡಯನದ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಆ.23ರ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವುದಾಗಿ ಪ್ರಕಟಿಸಿದ್ದರು.