ಕಾಶ್ಮೀರ: ಇಂದು 2ನೇ ಹಂತದ ಚುನಾವಣೆ

| Published : Sep 25 2024, 12:46 AM IST

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ ಬುಧವಾರ 2ನೇ ಹಂತದ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಬದ್‌ಗಾಮ್‌, ಗಂದರ್‌ಬಾಲ್‌, ನೌಶೇರಾ, ಸೆಂಟ್ರಲ್‌ ಶಾಲ್ತೆಂಗ್‌, ರಜೌರಿ, ರಿಯಾಸಿ ಸೇರಿದಂತೆ ಒಟ್ಟು 26 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬುಧವಾರ 2ನೇ ಹಂತದ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಬದ್‌ಗಾಮ್‌, ಗಂದರ್‌ಬಾಲ್‌, ನೌಶೇರಾ, ಸೆಂಟ್ರಲ್‌ ಶಾಲ್ತೆಂಗ್‌, ರಜೌರಿ, ರಿಯಾಸಿ ಸೇರಿದಂತೆ ಒಟ್ಟು 26 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಒಟ್ಟು 239 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25.78 ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಒಟ್ಟು 3502 ಮತಗಟ್ಟೆ ಇವೆ.

ಪ್ರಮುಖ ಅಭ್ಯರ್ಥಿಗಳು:

ಮಾಜಿ ಸಿಎಂ ಮತ್ತು ಎನ್‌ಸಿ ನಾಯಕ ಒಮರ್‌ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮುಖ್ಯಸ್ಥ ರವೀಂದರ್‌ ರೈನಾ, ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರೆ, ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್‌ ಬುಖಾರಿ ಸೇರಿದಂತೆ ಮುಂತಾದ ಅಭ್ಯರ್ಥಿಗಳು ಸ್ವರ್ಧೆಯಲ್ಲಿದ್ದಾರೆ.

ಸೆ.18 ರಂದು ನಡೆದ ಮೊದಲ ಹಂತದಲ್ಲಿ ಶೇ.61.38 ಮತದಾನವಾಗಿತ್ತು. ಆ.1 ರಂದು 40 ಕ್ಷೇತ್ರಗಳಿಗೆ ಇನ್ನೊಂದು ಹಂತದ ಚುನಾವಣೆ ನಡೆಲಿದೆ. ಅ.8ರಂದು ಮತ ಎಣಿಕೆ ನಡೆಯಲಿದೆ.