ಪುರಿ ದೇಗುಲದಲ್ಲಿ ಜ.1ರಿಂದ ಚಡ್ಡಿ, ಪಾರದರ್ಶಕ ಉಡುಗೆ, ಹರಿದ ಜೀನ್ಸ್‌ ನಿಷೇಧ

| Published : Oct 14 2023, 01:00 AM IST

ಪುರಿ ದೇಗುಲದಲ್ಲಿ ಜ.1ರಿಂದ ಚಡ್ಡಿ, ಪಾರದರ್ಶಕ ಉಡುಗೆ, ಹರಿದ ಜೀನ್ಸ್‌ ನಿಷೇಧ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ಜ.1ರಿಂದ ವಸ್ತ್ರ ಸಂಹಿತೆ ಜಾರಿಗೆ ಬರಲಿದ್ದು, ಅದರ ಅನ್ವಯ ಚಡ್ಡಿ, ಹರಿದ ಜೀನ್ಸ್‌ ಹಾಗೂ ನಮ್ಮ ಪದ್ಧತಿಗೆ ಅನುಗುಣವಾಗಿಲ್ಲದ ಪಾರದರ್ಶಕ ಬಟ್ಟೆಗಳನ್ನು ತೊಟ್ಟು ಬರುವವರಿಗೆ ಪ್ರವೇಶ ನಿಷಿದ್ಧವಾಗಲಿದೆ.
ಭುವನೇಶ್ವರ್‌: ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ಜ.1ರಿಂದ ವಸ್ತ್ರ ಸಂಹಿತೆ ಜಾರಿಗೆ ಬರಲಿದ್ದು, ಅದರ ಅನ್ವಯ ಚಡ್ಡಿ, ಹರಿದ ಜೀನ್ಸ್‌ ಹಾಗೂ ನಮ್ಮ ಪದ್ಧತಿಗೆ ಅನುಗುಣವಾಗಿಲ್ಲದ ಪಾರದರ್ಶಕ ಬಟ್ಟೆಗಳನ್ನು ತೊಟ್ಟು ಬರುವವರಿಗೆ ಪ್ರವೇಶ ನಿಷಿದ್ಧವಾಗಲಿದೆ. ಈ ವಿಚಾರವನ್ನು ಪುರಿ ಜಗನ್ನಾಥ ದೇವಾಲಯ ಆಡಳಿತಾತ್ಮಕ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಈಗಿನಿಂದಲೇ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಹಾಗಾಗಿ ಜನರು ದೇಗುಲದ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಭಕ್ತಾದಿಗಳು ನಮ್ಮ ಸಂಸ್ಕೃತಿಗೆ ಅನುಗುಣವಾದ ಬಟ್ಟೆಗಳನ್ನು ತೊಟ್ಟು ದೇಗುಲ ಪ್ರವೇಶಿಸುವಂತೆ ಮಂಡಳಿ ಮನವಿ ಮಾಡಿದೆ. ಬೇರೆ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಇರುವ ರೀತಿಯಲ್ಲಿ ಪುರಿ ದೇವಾಲಯದಲ್ಲೂ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂಬ ಆಗ್ರಹ ಮುಂಚಿನಿಂದಲೂ ಕೇಳಿ ಬಂದಿತ್ತು ಎಂಬುದಾಗಿ ಮಂಡಳಿ ತಿಳಿಸಿದೆ.