ಮಂಡಿಯೂರಿ ತಿರುಪತಿ ಮೆಟ್ಟಿಲು ಹತ್ತಿದ ಜಾಹ್ನವಿ ಕಪೂರ್‌!

| Published : Mar 23 2024, 01:14 AM IST / Updated: Mar 23 2024, 08:40 AM IST

ಸಾರಾಂಶ

ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್‌ ತಿರುಮಲಕ್ಕೆ ಮಂಡಿಯೂರಿ ಹತ್ತುವ ಮೂಲಕ ಹರಕೆ ತೀರಿಸಿದ್ದಾರೆ.

ತಿರುಮಲ: ಹಿರಿಯ ನಟಿ ದಿ. ಶ್ರೀದೇವಿ ಅವರ ಪುತ್ರಿ ಹಾಗೂ ಖ್ಯಾತ ನಟಿ ಜಾಹ್ನವಿ ಕಫೂರ್ ತಿರುಪತಿ ದೇಗುಲಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ ಮಂಡಿಯೂರಿ ಮೆಟ್ಟಿಲು ಹತ್ತಿ ಹರಕೆ ತೀರಿಸಿದ್ದಾರೆ.

ಗೆಳೆಯ ಶಿಖರ್ ಪಹರಿಯಾ ಮತ್ತು ಆತ್ನೀಯ ಸ್ನೇಹಿತೆ ಓರ್ರಿ ಜತೆಗೆ ವಿಶೇಷ ತೀರ್ಥಯಾತ್ರೆಗಾಗಿ ಬಾಲಾಜಿ ದೇವಸ್ಥಾನಕ್ಕೆಇತ್ತೀಚಿಗೆ ಜಾಹ್ನವಿ ಭೇಟಿ ನೀಡಿದ್ದರು. ಈ ವೇಲೆ ದೇಗುಲದ ಕೆಲ ಮಟ್ಟಿಲುಗಳನ್ನು ಮಂಡಿಯೂರಿ ಹತ್ತಿ ಹರಕೆ ಸಲ್ಲಿಸಿದರು.

‘ಇದು ನನಗೆ ಹೊಸ ಅನುಭವವಾಗಿದೆ. ಇದುವರೆಗೂ ಈ ದೇವಸ್ಥಾನಕ್ಕೆ 50 ಬಾರಿ ಭೇಟಿ ನೀಡಿದ್ದೇನೆ’ ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.