ಸಾರಾಂಶ
ಇಂಡಿಯಾ ಕೂಟದ ಆಹ್ವಾನದ ಬೆನ್ನಲ್ಲೇ ಉಭಯ ಪಕ್ಷಗಳ ಹೇಳಿಕೆ ನೀಡಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರ ರಚಿಸಲು ಹಾದಿ ಸುಗಮವಾಗಿದೆ
ನವದೆಹಲಿ: ಇಂಡಿಯಾ ಕೂಟದ ಭಾಗವಾಗುವಂತೆ ಆಹ್ವಾನ ಬಂದಿದೆ ಎಂಬ ವದಂತಿಗಳ ಬೆನ್ನಲ್ಲೇ, ನಮ್ಮ ಬೆಂಬಲ ಎನ್‌ಡಿಎಗೆ ಎಂದು ಟಿಡಿಪಿ ಮತ್ತು ಜೆಡಿಯು ಸ್ಪಷ್ಟಪಡಿಸಿವೆ. ಈ ಮೂಲಕ ಎನ್‌ಡಿಎ ಮೈತ್ರಿಕೂಟ ಅಚಲವಾಗಿದೆ ಎಂಬ ಸಂದೇಶ ರವಾನಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ‘ನಾವು ಎನ್‌ಡಿಎನಲ್ಲಿದ್ದೇವೆ. ಮುಂದೆಯೂ ಇರುತ್ತೇವೆ. ಕಳೆದ 5 ವರ್ಷಗಳಲ್ಲಿ ಆಂಧ್ರಪ್ರದೇಶ ನಷ್ಟ ಅನುಭವಿಸಿದೆ. ಅದನ್ನು ಸರಿಪಡಿಸುವ ಹೊಣೆ ನಮ್ಮ ಮುಂದಿದೆ’ ಎಂದು ಹೇಳಿದ್ದಾರೆ.ಇನ್ನೊಂದೆಡೆ ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ ಕೂಡಾ ‘ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವ ನಮ್ಮ ಭರವಸೆಯನ್ನು ನಾವು ಪುನರುಚ್ಚರಿಸುತ್ತೇವೆ’ ಎಂದು ಹೇಳಿದ್ದಾರೆ.