ಸಾರಾಂಶ
ಜೆಇಇ ಪರೀಕ್ಷೆ ಎದುರಿಸಲು ಧೈರ್ಯವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ತನ್ನನ್ನು ಕ್ಷಮಿಸುವಂತೆ ತಂದೆಗೆ ಮರಣಪತ್ರ ಬರೆದು ಕೋಟಾದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೋಟಾ: ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳನ್ನು ಸೇರಲು ಅರ್ಹತೆಯಾಗಿರುವ ಜಂಟಿ ಪ್ರವೇಶ ಪರೀಕ್ಷೆಯನ್ನು(ಜೆಇಇ) ಎದುರಿಸಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ದಯವಿಟ್ಟು ಕ್ಷಮಿಸಿ ಅಪ್ಪಾ ಎಂದು ಮರಣಪತ್ರ ಬರೆದು ವಿದ್ಯಾರ್ಥಿಯೊಬ್ಬ ನಗರದ ತನ್ನ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಅಭಿಷೇಕ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ತನ್ನ ತರಬೇತಿ ಕೇಂದ್ರ ಜ.29 ಮತ್ತು ಫೆ.19ರಂದು ನಡೆಸಿದ ಪರೀಕ್ಷೆಗಳಿಗೆ ಗೈರು ಹಾಜರಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ 2024ರಲ್ಲಿ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಆರಕ್ಕೇರಿದೆ.