ಸಾರಾಂಶ
ಕಟುಕನೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು 50ಕ್ಕೂ ಅಧಿಕ ತುಂಡುಗಳಾಗಿ ಕತ್ತರಿಸಿ ಕಾಡಲ್ಲಿ ಎಸೆದ ಆಘಾತಕಾರಿ ಘಟನೆ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ ನಡೆದಿದೆ.
ರಾಂಚಿ: ಕಟುಕನೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು 50ಕ್ಕೂ ಅಧಿಕ ತುಂಡುಗಳಾಗಿ ಕತ್ತರಿಸಿ ಕಾಡಲ್ಲಿ ಎಸೆದ ಆಘಾತಕಾರಿ ಘಟನೆ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ ನಡೆದಿದೆ. ಬೀದಿ ನಾಯೊಂದರ ಬಾಯಲ್ಲಿ ಮಾನವರ ಕೈಯ್ಯನ್ನು ಕಂಡ ಜರಿಯಾಘರ್ ಪೊಲೀಸರು ಅದರ ಜಾಡು ಹಿಡಿದು ಆರೋಪಿ ನರೇಶ್ ಭಗೇರಾನನ್ನು ಬಂಧಿಸಿದ್ದಾರೆ.
ಏನಿದು ಘಟನೆ?:
ಜಾರ್ಖಂಡ್ ಮೂಲದ ನರೇಶ್ ತಮಿಳುನಾಡಿನ ಮಾಂಸದ ಅಂಗಡಿಯಲ್ಲಿ ಕೆಲಸಕ್ಕಿದ್ದ. ಅಲ್ಲಿ ಆತ ಕೋಳಿ ಕುಯ್ಯುವುದರಲ್ಲಿ ಎಕ್ಸ್‌ಪರ್ಟ್ ಎಂದೇ ಖ್ಯಾತಿ ಹೊಂದಿದ್ದ. ಕೆಲ ವರ್ಷಗಳಿಂದ ಆತ ಸಮೀಪದ ಮಹಿಳೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ.
ಕೆಲ ಸಮಯದ ಹಿಂದಿ ನರೇಶ್ ತವರು ರಾಜ್ಯಕ್ಕೆ ಹೋಗಿದ್ದ ವೇಳೆ ಅಲ್ಲಿ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದ. ಈ ವಿಷಯವನ್ನು ಆತ ಲಿವ್‌ಇನ್ ಸಂಗಾತಿಗೆ ತಿಳಿಸಿರಲಿಲ್ಲ. ಹೀಗೆ ವಿವಾಹದ ಬಳಿಕ ಮರಳಿ ತಮಿಳುನಾಡಿಗೆ ಹೋಗಿದ್ದ ನರೇಶ್ ಅಲ್ಲಿಂದ ಲಿವ್‌ಇನ್ ಸಂಗಾತಿಯನ್ನು ಜಾರ್ಖಂಡ್‌ನ ಕುಂತಿಗೆ ಕರೆತಂದಿದ್ದ. ಆದರೆ ಆಕೆಯನ್ನು ಮನೆಗೆ ಸೇರಿಸಲು ಪತ್ನಿ ಒಪ್ಪಿರಲಿಲ್ಲ. ಹೀಗಾಗಿ ಲಿವ್ ಇನ್ ಸಂಗಾತಿಯನ್ನು ಕಾಡಿಗೆ ಕರೆದೊಯ್ದ ನರೇಶ್ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಬಟ್ಟೆಯಿಂದ ಕತ್ತುಹಿಸುಕಿ ಕೊಂದು, ಕೊನೆಗೆ ಆಕೆಯ ದೇಹವನ್ನು 40-50 ಭಾಗಗಳಾಗಿ ತುಂಡರಿಸಿ ಅಲ್ಲೇ ಎಸೆದು ಮರಳಿದ್ದಾನೆ.