ಸಾರಾಂಶ
ನಿವೃತ್ತಿ ದಿನವೇ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆಗೆ ಅನುಮತಿ ನೀಡುವ ತೀರ್ಪು ಪ್ರಕಟಿಸಿದ್ದ ನ್ಯಾ ವಿಶ್ವೇಶ್ ಈಗ ಮಿಶ್ರಾ ಮರುವಸತಿ ವಿವಿ ಲೋಕಪಾಲ ಆಗಿ ನೇಮಕಗೊಂಡಿದ್ದಾರೆ.
ಲಖನೌ: ಜ್ಞಾನವಾಪಿ ಮಸೀದಿಯ ತಳಮಹಡಿಯಲ್ಲಿರುವ ವ್ಯಾಸ್ ಕೆ ಠಿಖಾನಾದಲ್ಲಿ ಹಿಂದೂಗಳಿಗೆ ಪೂಜಿಸಲು ಅನುಮತಿ ನೀಡುವಂತೆ ತಮ್ಮ ನಿವೃತ್ತಿಯ ದಿನವೇ ತೀರ್ಪು ನೀಡಿದ್ದ ವಾರಾಣಸಿ ಜಿಲ್ಲಾ ಕೋರ್ಟ್ ಜಡ್ಜ್ ಎ.ಕೆ. ವಿಶ್ವೇಶ ಅವರನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು, ಡಾ. ಶಕುಂತಲಾ ಮಿಶ್ರಾ ರಾಷ್ಟ್ರೀಯ ಪುನರ್ವಸತಿ ವಿಶ್ವವಿದ್ಯಾನಿಲಯದ ಲೋಕ್‌ಪಾಲ್ (ಮೇಲ್ವಿಚಾರಕ) ಆಗಿ ನೇಮಿಸಿದೆ.
ಈ ಹುದ್ದೆಯಲ್ಲಿ ನ್ಯಾ. ವಿಶ್ವೇಶ್ ಅವರು ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸುವ ಓಂಬಡ್ಸ್‌ಮನ್ ಆಗಿ ಮೂರು ವರ್ಷಗಳ ಅವಧಿಗೆ ನೇಮಕವಾಗಿದ್ದಾರೆ.
ಈ ವಿವಿಯನ್ನು ರಾಜ್ಯ ಸರ್ಕಾರ ಅಂಗವಿಕಲ ಮಕ್ಕಳ ಉಪಯೋಗಕ್ಕಾಗಿ ಸ್ಥಾಪಿಸಿದೆ. ನ್ಯಾ. ವಿಶ್ವೇಶ್ ಅವರ ತಮ್ಮ ನಿವೃತ್ತಿ ದಿನವಾದ ಜ.31ರಂದು ವಾರಾಣಸಿಯ ಜ್ಞಾನವಾಪಿ ಮಸೀದಿಯ ತಳಮಹಡಿಯಲ್ಲಿರುವ ವ್ಯಾಸ್ ಕೆ ಠಿಖಾನಾದಲ್ಲಿ ಏಳು ದಿನಗಳೊಳಗಾಗಿ ಹಿಂದೂಗಳ ಪೂಜೆಗೆ ಸಕಲ ವ್ಯವಸ್ಥೆ ಮಾಡುವಂತೆ ಸ್ಥಳೀಯ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದರು.