29ನೇ ಬಾರಿ ಎವರೆಸ್ಟ್ ಶಿಖರ ಏರಿ ತನ್ನದೇ ದಾಖಲೆ ಮುರಿದ ಕಮಿರಿಟಾ

| Published : May 13 2024, 12:01 AM IST / Updated: May 13 2024, 04:52 AM IST

29ನೇ ಬಾರಿ ಎವರೆಸ್ಟ್ ಶಿಖರ ಏರಿ ತನ್ನದೇ ದಾಖಲೆ ಮುರಿದ ಕಮಿರಿಟಾ
Share this Article
  • FB
  • TW
  • Linkdin
  • Email

ಸಾರಾಂಶ

ನೇಪಾಳದ ಪರ್ವತಾರೋಹಿ ಕಮಿ ರೀಟಾ ಶೆರ್ಪಾ, 29ನೇ ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನೇರುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ನವದೆಹಲಿ: ನೇಪಾಳದ ಪರ್ವತಾರೋಹಿ ಕಮಿ ರೀಟಾ ಶೆರ್ಪಾ, 29ನೇ ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನೇರುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 54 ವರ್ಷದ ಶೆರ್ಪಾ, ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ ತುದಿಯನ್ನು ಕಳೆದ ವರ್ಷ ವಾರದಲ್ಲಿಯೇ ಎರಡು ಬಾರಿ ತಲುಪಿದ ಸಾಧನೆ ಮಾಡಿದ್ದರು. 

ಈ ಬಾರಿ ಮತ್ತೊಮ್ಮೆ ಎವರೆಸ್ಟ್ ತುದಿ ತಲುಪುವ ಮೂಲಕ ಅತಿ ಹೆಚ್ಚು ಬಾರಿ ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಏಕೈಕ ವ್ಯಕ್ತಿ ಎನ್ನುವ ತಮ್ಮದೇ ದಾಖಲೆಯನ್ನು ತಾವೇ ಮುರಿದಿದ್ದಾರೆ.ಸುಮಾರು 28 ಪರ್ವತಾರೋಹಿಗಳ ತಂಡ ಭಾನುವಾರ ಬೆಳಗ್ಗೆ 7.25ರ ವೇಳೆಗೆ ‘ಸೆವೆನ್ ಸಮ್ಮಿಟ್ ಟ್ರೆಕ್ಸ್’ ಆಯೋಜಿಸಿದ್ದ ಕಾರ್ಯಕ್ರಮದ ಭಾಗವಾಗಿ ಮೌಂಟ್ ಎವರೆಸ್ಟ್ ಹತ್ತಿದ್ದರು. ಈ ತಂಡದಲ್ಲಿ ಕಮಿ ರೀಟಾ ಶರ್ಮ ಇತರ ಪರ್ವಾತಾರೋಹಿಗಳಿಗೆ ಮಾರ್ಗದರ್ಶಕರಾಗಿದ್ದರು.