ದೇಶಕ್ಕೆ ತಂದೆ ಇರಲ್ಲ, ಮಕ್ಕಳು ಇರ್ತಾರೆ: ಗಾಂಧಿ ಬಗ್ಗೆ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಮತ್ತೊಂದು ವಿವಾದ

| Published : Oct 03 2024, 01:15 AM IST / Updated: Oct 03 2024, 05:23 AM IST

kangana-ranaut-controvertial-statement
ದೇಶಕ್ಕೆ ತಂದೆ ಇರಲ್ಲ, ಮಕ್ಕಳು ಇರ್ತಾರೆ: ಗಾಂಧಿ ಬಗ್ಗೆ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಮತ್ತೊಂದು ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಅವರು ಮಹಾತ್ಮ ಗಾಂಧೀಜಿ ಕುರಿತು ನೀಡಿರುವ ಪರೋಕ್ಷ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ.

ನವದೆಹಲಿ: ಇತ್ತೀಚೆಗಷ್ಟೇ ರೈತ ಕಾಯ್ದೆ ಕುರಿತ ಹೇಳಿಕೆ ನೀಡಿ ಕ್ಷಮೆ ಯಾಚಿಸಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಮತ್ತೊಂದು ವಿವಾದದಲ್ಲಿ ಸಿಕ್ಕಿಬಿದ್ದಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕುರಿತು ಅವರು ನೀಡಿದ ಪರೋಕ್ಷ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಭಾನುವಾರ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟೊಂದನ್ನು ಹಾಕಿರುವ ಕಂಗನಾ, ‘ದೇಶಕ್ಕೆ ತಂದೆ (ರಾಷ್ಟ್ರಪಿತ) ಇರಲ್ಲ, ಅದರೆ ಮಕ್ಕಳು (ಲಾಲ್‌) ಇರುತ್ತಾರೆ. ಭಾರತ ಮಾತೆಯ ಈ ಮಕ್ಕಳಿಗೆ ಧನ್ಯವಾದ’ ಎಂದು ಬರೆದಿದ್ದಾರೆ.

ಅವರ ಈ ಹೇಳಿಕೆ ಗಾಂಧೀಜಿ ಅವರಿಗೆ ನೀಡಲಾಗಿರುವ ರಾಷ್ಟ್ರಪಿತ ಗೌರವವನ್ನು ಕಡೆಗಣಿಸುವ ರೀತಿಯದ್ದು ಎಂಬ ವಿಶ್ಲೇಷಣೆಗೆ ಕಾರಣವಾಗಿದೆ. ಬಿಜೆಪಿ ಸಂಸದೆ ಹೇಳಿಕೆಯನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ. ಇನ್ನೊಂದೆಡೆ ಪಂಜಾಬ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಕೂಡಾ ಕಂಗನಾ ಹೇಳಿಕೆ ಟೀಕಿಸಿದ್ದಾರೆ.