ಸಾರಾಂಶ
ನವದೆಹಲಿ: ಭಾರತದಲ್ಲಿ ಅನ್ಯ ರಾಷ್ಟ್ರಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವಿದ್ಯಾರ್ಜನೆಗೆ ಕರ್ನಾಟಕವೇ ಮೊದಲ ಆದ್ಯತೆಯಾಗಿದೆ.
ಇಲ್ಲಿ ಇತರ ರಾಜ್ಯಗಳಿಗಿಂತ ಹೆಚ್ಚು ಅಂದರೆ 6,004 ವಿದೇಶಿ ವಿದ್ಯಾರ್ಥಿಗಳು ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಉನ್ನತ ಶಿಕ್ಷಣ 2021-22ರ ಅಖಿಲ ಭಾರತ ಸಮೀಕ್ಷೆ ದತ್ತಾಂಶ ಹೇಳಿದೆ.
ಕರ್ನಾಟಕ ನಂತರ ಎರಡನೇ ಸ್ಥಾನವನ್ನು ಪಂಜಾಬ್ 5,971 ವಿದೇಶಿ ವಿದ್ಯಾರ್ಥಿಗಳಿಗೆ ವ್ಯಾಸಂಗ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದೆ.
ಮಹಾರಾಷ್ಟ್ರ 4,856 ಮತ್ತು ಉತ್ತರ ಪ್ರದೇಶ 4,323 ವಿದೇಶಿ ವಿದ್ಯಾರ್ಥಿಗಳ ಮೂಲಕ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ ಎಂದು ದತ್ತಾಂಶ ಹೇಳಿದೆ.
ನೇಪಾಳವೊಂದರಿಂದಲೇ ಅತಿಹೆಚ್ಚು, 13,126 ವಿದ್ಯಾರ್ಥಿಗಳು ಭಾರತದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆಗಮಿಸಿದ್ದಾರೆ.
ಅಫ್ಘಾನಿಸ್ತಾನ, ಅಮೆರಿಕ, ಬಾಂಗ್ಲಾದೇಶ ಮತ್ತು ಯುಎಇ ರಾಷ್ಟ್ರಗಳು ಸೇರಿ ಸುಮಾರು 170 ದೇಶಗಳಿಂದ ಒಟ್ಟು 46,878 ವಿದೇಶಿ ವಿದ್ಯಾರ್ಥಿಗಳು ಇಲ್ಲಿ ಉನ್ನತ ಶಿಕ್ಷಣ ಹೊಂದುತ್ತಿದ್ದಾರೆ ಎಂದು ದತ್ತಾಂಶ ತೋರಿಸಿದೆ.
;Resize=(128,128))
;Resize=(128,128))
;Resize=(128,128))
;Resize=(128,128))