ಸಾರಾಂಶ
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ ಸೋಲುವ ಮೂಲಕ ಚಂದ್ರಶೇಖರ್ ರಾವ್ ಅವರ ಹ್ಯಾಟ್ರಿಕ್ ಸಿಎಂ ಪಟ್ಟದ ಕನಸು ಭಗ್ನವಾಗಿದೆ
- ಎಂಜಿಆರ್ ಹ್ಯಾಟ್ರಿಕ್ ಸಿಎಂ ದಾಖಲೆ ಅಬಾಧಿತ
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ ಸೋಲುವ ಮೂಲಕ ಚಂದ್ರಶೇಖರ್ ರಾವ್ ಅವರ ಹ್ಯಾಟ್ರಿಕ್ ಸಿಎಂ ಪಟ್ಟದ ಕನಸು ಭಗ್ನವಾಗಿದೆ. ಇದರೊಂದಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹ್ಯಾಟ್ರಿಕ್ ಸಿಎಂ ಆಗಿ ದಾಖಲೆ ಹೊಂದಿದ್ದ ತಮಿಳುನಾಡಿನ ಎಂ ಜಿ ರಾಮಚಂದ್ರನ್ ಅವರ ದಾಖಲೆ ಸರಿಗಟ್ಟುವ ಅವಕಾಶವನ್ನು ಕೆಸಿಆರ್ ಕಳೆದುಕೊಂಡಿದ್ದಾರೆ.2014ರಲ್ಲಿ ತೆಲಂಗಾಣ ರಾಜ್ಯ ಉದಯ ಆದಾಗಿನಿಂದ ಇಲ್ಲಿಯವರೆಗೆ ಸತತ 9 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಚಂದ್ರಶೇಖರ್ ರಾವ್ ಅಧಿಕಾರ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್ ಅವರು 1977ರಿಂದ 1987ರವರೆಗೆ 10 ವರ್ಷಗಳ ಅವಧಿಯಲ್ಲಿ ಸತತ 3 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆಡಳಿತ ನಡೆಸಿದ್ದರು. ಇದರೊಂದಿಗೆ ಸತತವಾಗಿ 3 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಕ್ಷಿಣ ಭಾರತದ ಏಕೈಕ ವ್ಯಕ್ತಿ ಎಂಬ ದಾಖಲೆ ಎಂಜಿಆರ್ ಅವರಲ್ಲೇ ಮತ್ತಷ್ಟು ಕಾಲ ಉಳಿಯುವಂತಾಗಿದೆ.