ಮದ್ಯ ಹಗರಣದ ನೇರ ಫಲಾನುಭವಿ ಸಿಎಂ ಕೇಜ್ರಿ: ಇ.ಡಿ.

| Published : Jul 11 2024, 01:35 AM IST / Updated: Jul 11 2024, 05:02 AM IST

Delhi CM Arvind Kejriwal
ಮದ್ಯ ಹಗರಣದ ನೇರ ಫಲಾನುಭವಿ ಸಿಎಂ ಕೇಜ್ರಿ: ಇ.ಡಿ.
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯ ಆಮ್‌ಆದ್ಮಿ ಸರ್ಕಾರದ ಆಡಳಿತದಲ್ಲಿ ನಡೆದ 100 ಕೋಟಿ ರು.ಮೌಲ್ಯದ ಅಬಕಾರಿ ಲೈಸೆನ್ಸ್‌ ಹಂಚಿಕೆ ಹಗರಣದ ನೇರ ಫಲಾನುಭವಿ ಸ್ವತಃ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.

ನವದೆಹಲಿ: ದೆಹಲಿಯ ಆಮ್‌ಆದ್ಮಿ ಸರ್ಕಾರದ ಆಡಳಿತದಲ್ಲಿ ನಡೆದ 100 ಕೋಟಿ ರು.ಮೌಲ್ಯದ ಅಬಕಾರಿ ಲೈಸೆನ್ಸ್‌ ಹಂಚಿಕೆ ಹಗರಣದ ನೇರ ಫಲಾನುಭವಿ ಸ್ವತಃ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.

ಲೈಸೆನ್ಸ್‌ ಹಂಚಿಕೆಗಾಗಿ ಪಡೆದ 100 ಕೋಟಿ ಲಂಚದ ಹಣದಲ್ಲಿ 45 ಕೋಟಿ ರು.ಗಳನ್ನು ಗೋವಾ ವಿಧಾನಸಭಾ ಚುನಾವಣೆಗೆ ಆಪ್‌ ಬಳಸಿಕೊಂಡಿತ್ತು. ಅಲ್ಲದೆ ಈ ಹಣವನ್ನು ಬಳಸಿಕೊಂಡೇ ಗೋವಾ ವಿಧಾನಸಭಾ ಚುನಾವಣೆ ವೇಳೆ ಐಷಾರಾಮಿ ಹೋಟೆಲ್‌ನಲ್ಲಿ ಕೇಜ್ರಿವಾಲ್‌ ಉಳಿದುಕೊಂಡಿದ್ದರು. ಪ್ರಕರಣದಲ್ಲಿ ಸ್ವತಃ ಸಿಎಂ ನೇರ ಫಲಾನುಭವಿ. ಉಳಿದ ಆರೋಪಿ ಸಚಿವರು ನೆಪಮಾತ್ರ ಎಂದು ಹೇಳಿದೆ.

ಪ್ರಕರಣ ಸಂಬಂಧ ದೆಹಲಿ ನ್ಯಾಯಾಲಯಕ್ಕೆ ಇ.ಡಿ. ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಈ ಮಾಹಿತಿ ಇದೆ. ಆರೋಪಪಟ್ಟಿಯಲ್ಲಿ ಕೇಜ್ರಿವಾಲ್‌ರನ್ನು ಏಳನೇ ಆರೋಪಿಯಾಗಿ ಉಲ್ಲೇಖಿಸಲಾಗಿದೆ. ದೆಹಲಿ ಮದ್ಯ ಹಗರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಕ್ರಮದಿಂದ ಗಳಿಸಿದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಪ್, ಬಿಜೆಪಿ ನಮ್ಮ ಪಕ್ಷದ ವಿರುದ್ಧ ಪಿತೂರಿ ನಡೆಸುತ್ತಿದ್ದು, ನಮ್ಮ ಅಸ್ತಿತ್ವವನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಮಾ.21ರಂದು ಬಂಧಿತರಾದ ಕೇಜ್ರಿವಾಲ್ ಅವರ ಹೇಳಿಕೆಗಳನ್ನು 11 ಬಾರಿ ದಾಖಲಿಸಲಾಗಿದ್ದು, ಪ್ರತಿ ಬಾರಿ ಹಾರಿಕೆಯ ಉತ್ತರ ನೀಡಿದ್ದರು. ಅವರು ಬಳಸುತ್ತಿದ್ದ ಡಿಜಿಟಲ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದ್ದು ಅದನ್ನು ತೆರೆಯಲು ಅವರು ನಿರಾಕರಿಸಿದ್ದಾರೆ ಎಂದು ಇ.ಡಿ. ತಿಳಿಸಿದೆ.