ಸಾರಾಂಶ
ವಯನಾಡಿನಲ್ಲಿ ಸಂಭವನೀಯ ಪ್ರಾಕೃತಿಕ ವಿಪತ್ತಿನ ಬಗ್ಗೆ ಜುಲೈ 23ರಂದೇ ಕೇರಳ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಕೇರಳ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದಾರೆ.
ತಿರುವನಂತಪುರ: ವಯನಾಡಿನಲ್ಲಿ ಸಂಭವನೀಯ ಪ್ರಾಕೃತಿಕ ವಿಪತ್ತಿನ ಬಗ್ಗೆ ಜುಲೈ 23ರಂದೇ ಕೇರಳ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಕೇರಳ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದಾರೆ.
ಹವಾಮಾನ ಇಲಾಖೆ ಭೂಕುಸಿತದ ಪಾಕೃತಿಕ ವಿಪತ್ತಿನ ಬಗ್ಗೆ ಹೇಳಿರಲಿಲ್ಲ, ಆರೆಂಜ್ ಅಲರ್ಟ್ ಘೋಷಿಸಿ, ಮಳೆಯ ಮುನ್ಸೂಚನೆಯನ್ನಷ್ಟೇ ನೀಡಿತ್ತು’ ಎಂದಿದ್ದಾರೆ.
‘ಭಾರತೀಯ ಹವಾಮಾನ ಇಲಾಖೆ, ಭೂಕುಸಿತ ಸಂಭವಿಸುವ ಮುನ್ನ ಜಿಲ್ಲೆಯಲ್ಲಿ ಕೇವಲ ಆರೆಂಜ್ ಅಲರ್ಟ್ ಘೋಷಿಸಿ, 500 ಮಿ.ಮೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು. ಆದರೆ ಇಲಾಖೆ ನೀಡಿದ ಸೂಚನೆಗಿಂತಲೂ ಅಧಿಕ ಮಳೆಯಾಗಿದೆ.
ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ ಬಳಿಕ ರೆಡ್ ಅಲರ್ಟ್ ಘೋಷಿಸಲಾಗಿತ್ತು’ ಎಂದು ಸಿಎಂ ತಿರುಗೇಟು ನೀಡಿದ್ದಾರೆ.ಇದೇ ಸಂದರ್ಭದಲ್ಲಿ ಶಾ ಹೇಳಿಕೆಗೆ ಸಂಬಂಧಿಸಿದಂತೆ ಇದು ‘ದೂಷಿಸುವ ಆಟಕ್ಕೆ ಸರಿಯಾದ ಸಮಯವಲ್ಲ ’ಎಂದೂ ಹೇಳಿದ್ದಾರೆ.