ಸಾರಾಂಶ
ಇಸ್ರೇಲ್ ಪ್ರಧಾನಿ ನೆತನ್ಯಾಹು ಒಬ್ಬ ಯುದ್ಧ ಖೈದಿ ಆತನನ್ನು ವಿಚಾರಣೆ ನಡೆಸದೆ ಗುಂಡಿಟ್ಟು ಕೊಲ್ಲಬೇಕು’ ಎಂದು ಕೇರಳದ ಕಾಂಗ್ರೆಸ್ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಸರಗೋಡು (ಕೇರಳ): ‘ಇಸ್ರೇಲ್ ಪ್ರಧಾನಿ ನೆತನ್ಯಾಹು ಒಬ್ಬ ಯುದ್ಧ ಖೈದಿ ಆತನನ್ನು ವಿಚಾರಣೆ ನಡೆಸದೆ ಗುಂಡಿಟ್ಟು ಕೊಲ್ಲಬೇಕು’ ಎಂದು ಕೇರಳದ ಕಾಂಗ್ರೆಸ್ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಸರಗೋಡಿನಲ್ಲಿ ಪ್ಯಾಲೆಸ್ತೀನ್ ಪರ ರ್‍ಯಾಲಿಯಲ್ಲಿ ಮಾತನಾಡಿದ ಸಂಸದ ರಾಜಮೋಹನ್ ಉನ್ನೀಥನ್,‘ಎರಡನೇ ಮಹಾಯುದ್ಧದ ಬಳಿಕ ನರೆಂಬರ್ಗ್ ವಿಚಾರಣೆ ಎಂಬ ಒಂದು ಪ್ರತೀತಿ ಶುರುವಾಯಿತು. ಅದರಲ್ಲಿ ಯುದ್ಧಖೈದಿಗಳನ್ನು ಯಾವುದೇ ವಿಚಾರಣೆ ನಡೆಸದೆ ಕೊಂದು ಹಾಕಲಾಗುತ್ತಿತ್ತು. ಇದೀಗ ಬೆಂಜಮಿನ್ ನೆತನ್ಯಾಹು ಅದೇ ಸ್ಥಾನದಲ್ಲಿದ್ದಾರೆ. ಅವರನ್ನು ಯಾವುದೇ ವಿಚಾರಣೆ ಮಾಡದೆ ಗುಂಡಿಟ್ಟು ಹತ್ಯೆ ಮಾಡಬೇಕು’ ಎಂದು ವಿವಾದಿತ ಹೇಳಿಕೆ ನೀಡಿದರು.