ಕೇರಳದ ತಿರುವನಂತಪುರದಲ್ಲಿರುವ ಶಾಲೆಯೊಂದು ಕೃತಕ ಬುದ್ಧಿಮತ್ತೆಯ (ಎಐ) ರೋಬೋ ಶಿಕ್ಷಕಿಯೊಬ್ಬಳನ್ನು ಪರಿಚಯಿಸಿದೆ. ಈವರೆಗೆ ಟೀವಿ ನಿರೂಪಣೆ ಸೇರಿ ವಿವಿಧ ವಲಯಗಳಲ್ಲಿ ಪ್ರಸಿದ್ಧಿ ಪಡೆದಿದ್ದ ‘ಎಐ ಮನುಷ್ಯರು’ ಈಗ ಮೊದಲ ಬಾರಿ ಶಾಲೆಗೂ ಲಗ್ಗೆ ಇಟ್ಟಂತಾಗಿದೆ.

ತಿರುವನಂತಪುರ: ಕೇರಳದ ತಿರುವನಂತಪುರದಲ್ಲಿರುವ ಶಾಲೆಯೊಂದು ಕೃತಕ ಬುದ್ಧಿಮತ್ತೆಯ (ಎಐ) ರೋಬೋ ಶಿಕ್ಷಕಿಯೊಬ್ಬಳನ್ನು ಪರಿಚಯಿಸಿದೆ. 

ಈವರೆಗೆ ಟೀವಿ ನಿರೂಪಣೆ ಸೇರಿ ವಿವಿಧ ವಲಯಗಳಲ್ಲಿ ಪ್ರಸಿದ್ಧಿ ಪಡೆದಿದ್ದ ‘ಎಐ ಮನುಷ್ಯರು’ ಈಗ ಮೊದಲ ಬಾರಿ ಶಾಲೆಗೂ ಲಗ್ಗೆ ಇಟ್ಟಂತಾಗಿದೆ.

ಎಐ ಶಿಕ್ಷಕಿಗೆ ‘ಐರಿಸ್‌’ ಎಂದು ಹೆಸರಿಡಲಾಗಿದೆ. ಇದನ್ನು ಕಡುವಾಯಿಲ್ ತಂಗಳ್ ಚಾರಿಟೇಬಲ್ ಟ್ರಸ್ಟ್‌ನ ಶಾಲೆಯಲ್ಲಿ ಇರಿಸಲಾಗಿದೆ. ಮೇಕರ್ಸ್‌ ಎಜುಟೆಕ್‌ ಎಂಬ ತಂತ್ರಜ್ಞಾನ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ.

 ‘ಕೇರಳ ರಾಜ್ಯದಲ್ಲಿ ಮತ್ತು ಪ್ರಾಯಶಃ ಇಡೀ ದೇಶದಲ್ಲೇ ಮೊದಲ ಹುಮನಾಯ್ಡ್ ರೋಬೋಟ್ ಶಿಕ್ಷಕಿ ಏಂಬ ಹಿರಿಮೆ ‘ಐರಿಸ್’ ಗಿದೆ.

ಸೀರೆ ಉಟ್ಟು, ಕುಂಕುಮ ಹಚ್ಚಿಕೊಂಡು ಸ್ಕೇಟಿಂಗ್‌ ವೀಲ್‌ ಮೂಲಕ ‘ಐರಿಸ್’ ಎಐ ಶಿಕ್ಷಕಿ ಕ್ಲಾಸ್‌ ತುಂಬ ಓಡಾಡುತ್ತಾಳೆ. 

ವಿವಿಧ ಸಂಕೀರ್ಣ ವಿಷಯಗಳ ಬೋಧನೆ ಮಾಡಿ ಅದಕ್ಕೆ ಉತ್ತರವನ್ನು ಆಕೆ ನೀಡುತ್ತಾಳೆ. ಮಕ್ಕಳ ಬಳಿ ಸ್ಕೇಟಿಂಗ್‌ ವೀಲ್‌ ಮೂಲಕವೇ ಸಂಚರಿಸಿ ಅವರ ಕೈ ಕೂಡ ಕುಲುಕುತ್ತಾಳೆ.